ಮಹಿಳೆಯೊಂದಿಗೆ ಅಸಭ್ಯ ವರ್ತನೆ, ಪಿಡಿಓ, ಕರ ವಸೂಲಿಗಾರನಿಗೆ ಧರ್ಮದೇಟು
ಮಹಿಳಾ ಸಹದ್ಯೋಗಿಯೊಂದಿಗೆ ಅಸಭ್ಯ ವರ್ತನೆ ತೋರಿದ ಅಧಿಕಾರಿಗೆ ಗ್ರಾಮಸ್ಥರಿಂದ ಗೂಸಾ.
ಬಸವಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮದಲ್ಲಿ ಘಟನೆ.
ಹಾರಕೂಡ ಗ್ರಾಪಂ ಪಿಡಿಓ ಯೋಗಿಶ್ ಹಿರೇಮಠ ಹಾಗೂ ಕರವಸೂಲಿಗಾರ ಮಿಥುನ್ ರಾಥೋಡ್‌ಗೆ ಧರ್ಮದೇಟು.
ಗ್ರಾಪಂನಲ್ಲೇ ಕೆಲಸ ಮಾಡುವ ಮಹಿಳಾ ಸಹದ್ಯೋಗಿಯೊಂದಿಗೆ ದುರ್ವರ್ತನೆ ಆರೋಪ.
ಈ ಹಿನ್ನೆಲೆಯಲ್ಲಿ ಪಿಡಿಓರನ್ನು ಪ್ರಶ್ನಿಸಿದ ಗ್ರಾಮದ ಕೆಲ ಯುವಕರು.
ಈ ವೇಳೆ ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸಿದ ಯುವಕರು ಹಾಗೂ ಪಿಡಿಓ.
ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ ಮುಡಬಿ ಠಾಣಾ ಪೊಲೀಸರು.
ಗ್ರಾಮಕ್ಕೆ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದುಕೊಂಡ ತಾಪಂ ಇಡಿ ಸಂತೋಷ್ ಚೌಹಾಣ್.
ಅಸಭ್ಯ ವರ್ತನೆ ತೋರಿದ ಗ್ರಾಪಂ ಪಿಡಿಓ ಯೋಗೀಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ.
ಘಟನೆ ಬಳಿಕ ಮಹಿಳೆ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಕರವಸೂಲಿಗಾರ.
ಪಿಡಿಓರನ್ನ ಪೊಲೀಸ್ ಠಾಣೆಗೆ ಕರೆದೊಯ್ದ ಪೊಲೀಸರು.





