Google search engine
ಮನೆUncategorizedಈಶಾನ್ಯ ಪದವೀಧರರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಅಮರನಾಥ ಪಾಟೀಲ ಪರ ಪ್ರಚಾರಕ್ಕಾಗಿ

ಈಶಾನ್ಯ ಪದವೀಧರರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಅಮರನಾಥ ಪಾಟೀಲ ಪರ ಪ್ರಚಾರಕ್ಕಾಗಿ

ವಾಡಿ ಬಿಜೆಪಿ ಕಛೇರಿಯಲ್ಲಿ ಅಮರನಾಥ ಪಾಟೀಲ ಪರ ಪ್ರಚಾರ ಸಭೆ

ಚಿತ್ತಾಪುರ ತಾಲೂಕಿನ ವಾಡಿ (ಜಂ) ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಈಶಾನ್ಯ ಪದವೀಧರರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಪರ ಪ್ರಚಾರಕ್ಕಾಗಿ ನಿಯೋಜನೆಗೊಂಡ  ಪ್ರಮುಖರನ್ನು ಉದ್ದೇಶಿಸಿ  ವಿಧಾನ ಪರಿಷತ ಸದಸ್ಯರಾದ ಡಾ ಸಾಯಬಣ್ಣ ತಳವಾರ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ ನಿರುದ್ಯೋಗಿ ವಿದ್ಯಾವಂತ ಯುವಕರಿಗೆ ಉದ್ಯೋಗ, ಸ್ವಯಂ ಉದ್ಯೋಗಕ್ಕಾಗಿ ಕೌಶಲ ತರಬೇತಿಗಾಗಿ ಪ್ರೋತ್ಸಾಹ ಹಾಗೂ ಈ ಭಾಗದ ಶಿಕ್ಷಕರ ಮತ್ತು ಪದವೀಧರರ ಕಲ್ಯಾಣಕ್ಕಾಗಿ ಹಾಗೂ ಇಲ್ಲಿನ ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ಪಕ್ಷದ ವಿವಿಧ ಸ್ತರಗಳ ಹುದ್ದೆಗಳನ್ನು ನಿಭಾಯಿಸುವ ಮೂಲಕ ಅಮರನಾಥ ಪಾಟೀಲ ಅವರು ಶ್ರಮಿಸಿದ್ದಾರೆ.

ನಮ್ಮ ಭಾಗದ ಎಲ್ಲರ ಧ್ವನಿ ಯಾಗಿ ಕೆಲಸಮಾಡುವ ಮನಸ್ಸನ್ನು ಹೊಂದಿರುವಂತ ನಾಯಕರು ಆಯ್ಕೆ ಯಾದರೆ ಮಾತ್ರ ನಮ್ಮ ಮಕ್ಕಳು ಬಿಸಿ ಊಟಕ್ಕಾಗಿ ಎರಡೆರಡು ಕಿಲೋಮೀಟರ್ ನಡೆಯುವಂತ ಪರಿಸ್ಥಿತಿ ಮುಂದೆ ಬರುವುದಿಲ್ಲ ವಿದ್ಯಾವಂತ ನಿರುದ್ಯೋಗಿಗಳ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ  ನಮ್ಮ ಅಮರನಾಥ ಪಾಟೀಲ ಮಾಡುತ್ತಾರೆ ಎಂದು ಹೇಳಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!