ಬೀದರ್‌ನಲ್ಲಿ ರಾಜ್ಯ ಕಾಗ್ರೆಸ್ ಮಹಿಳಾ ಘಟಕ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿಕೆ. ಮೋದಿ ಕಾ ಪರಿವಾರದಲ್ಲಿ ಬರೀ ಅತ್ಯಾಚಾರಿಗಳು, ಕೊಲೆಗಡುಕರಿದ್ದಾರೆ. ಉಮೇಶ್ ರೆಡ್ಡಿಗಿಂತ ವಿಕೃತ ಕಾಮಿ ಪ್ರಜ್ವಲ್ ರೇವಣ್ಣನೇ ಇರಬಹುದು. ರಾಜ್ಯದಲ್ಲಿ ನಡೆದಿರುವ ಘಟನೆ ದೇಶವಲ್ಲ, ಪ್ರಪಂಚವೇ ಬೆಚ್ಚಿ ಬೀಳಿಸುವ ವಿದ್ರಾವಕ ಘಟನೆ. ಮನುಷ್ಯರೂ ಈ ರೀತಿ ನಡೆದುಕೊಳ್ತಾರಾ ಅಂತಾ ಪ್ರಶ್ನೆ ಮೂಡ್ತಿದೆ. ಬಿಜೆಪಿ ಮಹಿಳೆಯರ ಸಬಲೀಕರಣ ಮಾಡ್ತೀವಿ ಅಂತಾ ಅಧಿಕಾರಕ್ಕೆ ಬಂದಿರುವ ಪಕ್ಷ. ಹೀಗಾಗಿ, ಹೆಣ್ಮಕ್ಕಳನ್ನ ಎನ್‌ಡಿಎ ನಾಯಕರಿಂದ ರಕ್ಷಿಸಬೇಕಿದೆ. ಬೇಟಿ ಬಚಾವೋ ಬೇಟಿ ಪಡಾವೋ ಅವರ ಸ್ಲೋಗನ್ ಅರ್ಥವೇ ಇದು. ಬಿಜೆಪಿಗರಿಂದ ಆರೋಪಿಯನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ದೇಶಬಿಟ್ಟು ಹೋಗೋಕೆ ಸಹಕಾರ ಮಾಡಿದವ್ರು ಯಾರೆಂಬ ಬಗ್ಗೆ ತನಿಖೆ ಆಗ್ಬೇಕು, ಆರೋಪಿಗೆ ತಕ್ಷ ಶಿಕ್ಷೆ ಆಗ್ಬೇಕು. ಹೆಣ್ಮಕ್ಕಳಿಗೆ ಯಾವುದೇ ಜಾತಿ, ಧರ್ಮವಿಲ್ಲ, ಹೆಣ್ಮಕ್ಕಳೇ ಒಂದು ಜಾತಿ. ಎನ್‌ಡಿಎ ನಾಯಕರು ತಾಳಿಯ ಪ್ರಾಮುಖ್ಯತೆಯ ಬಗ್ಗೆ ತಿಳಿದು ಮಾತನಾಡ್ಬೇಕು. ಮೋದಿ ತಾಳಿಯ ಬಗ್ಗೆ ಮಾತಾಡಿದ್ರೂ ತಾರಾ, ಶೃತಿ, ಮಾಳವಿಕಾ ಸೇರಿ ಯಾವ ಬಿಜೆಪಿ ಮಹಿಳಾ ನಾಯಕರು ಈ ಬಗ್ಗೆ ಮಾತನಾಡಲ್ಲ. ಬಿಜೆಪಿಗರಿಗೆ ಮಹಿಳೆಯರು ಭೋಗದ ವಸ್ತು ಆಗಿದ್ದಾರೆ. ಸಂತ್ರಸ್ತ ಮಹಿಳೆಯರ ಬದುಕು ಕತ್ತಲೆಯಲ್ಲಿ ಇದೆ. ಪ್ರಧಾನಿಗಳು ತಾಯಿ ಸ್ಥಾನದಲ್ಲಿರುವ ಸಂತ್ರಸ್ತ ಮಹಿಳೆಯರಿಗೆ ಭರವಸೆ ಕೊಡ್ಬೇಕಿತ್ತು. ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಷಯದಲ್ಲಿ ಬಿಜೆಪಿಗರು ಯಾಕೆ ಮೌನವಾಗಿದ್ದಾರೆ. ನೇಹಾ ಹತ್ಯೆಯಾದಾಗ ರಾಜ್ಯಾದ್ಯಂತ ಪ್ರತಿಭಟನೆ ಮಾಡಿಸುವ ಬಿಜೆಪಿಗರು ಈಗ ಎಲ್ಲಿದ್ದಾರೆ. ಪ್ರಜ್ವಲ್ ರೆವಣ್ಣಗೆ ಪೆಂಡ್ರೈವ್ ಹಾರ ಹಾಕಿ ಸ್ವಾಗತ ಮಾಡ್ತೇವೆ.ಬೀದರ್‌ನಲ್ಲಿ ಎನ್‌ಡಿಎ ನಾಯಕರ ವಿರುದ್ಧ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್ ವಾಗ್ದಾಳಿ.





