ಅಬಕಾರಿ ಡಿಸಿ ಬಲೆಗೆ, ಲೋಕಾಯುಕ್ತ ಎಸ್ಪಿ ಹೇಳಿದ್ದೇನು? ಶನಿವಾರ ಮಧ್ಯಾಹ್ನ 12:30ರ ಸುಮಾರಿಗೆ, ಲಕ್ಷ್ಮೀ ನಾರಾಯಣ್ ನೀಡಿದ ದೂರಿನ ಮೇರೆಗೆ, ಅಬಕಾರಿ ಉಪ ಆಯುಕ್ತರೊಬ್ಬರು 80 ಲಕ್ಷ ರೂ. ಲಂಚದ ಬೇಡಿಕೆಯಲ್ಲಿದ್ದ 25 ಲಕ್ಷ ರೂ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 7(a) ಅಡಿ ಪ್ರಕರಣ ದಾಖಲಾಗಿದ್ದು, ಅಬಕಾರಿ ಕಾನ್ಸೆಬಲ್ ಲಕ್ಕಪ್ಪ ಮತ್ತು ಸೂಪರಿಂಟೆಂಡೆಂಟ್ ತಮ್ಮಣ್ಣ ಅವರನ್ನು ಬಂಧಿಸಲಾಗಿದೆ ಉಪ ಆಯುಕ್ತರ ಮಟ್ಟದಿಂದ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಗಂಭೀರ ವಿಷಯ ಎಂದು ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ





