ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳ 911 ನೇ ತುಲಾಭಾರ ಕಾರ್ಯಕ್ರಮ ಯಲಕಪಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿತು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಯಲಕಪಳ್ಳಿ ಗ್ರಾಮದಲ್ಲಿ ಚಂದ್ರಕಲಾ ಹಾಗೂ ಶಿವಲಿಂಗಯ್ಯ ಸ್ಥಾವರಮಠ ದಂಪತಿಗಳಿಂದ ತುಲಾಭಾರ ಸೇವೆ ನಡೆಸಲಾಯಿತು ನಂತರ ಶ್ರೀಗಳು ಅಮರೇಶ್ವರ ಹಿರೇಮಠಕ್ಕೆ ಭೇಟಿ ನೀಡಿ ಮಠದ ಆವರಣದ ಸ್ಥಳವನ್ನು ವೀಕ್ಷಣೆ ಮಾಡಿ ಭಕ್ತರ ಅಪೇಕ್ಷೆಯಂತೆ ಶ್ರೀಮಠದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಧಾರ್ಮಿಕ ಕಾರ್ಯಗಳ ಬಗ್ಗೆ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.ಗ್ರಾಮದ ಹಲವು ಭಕ್ತರ ಮನೆಯಲ್ಲಿ ಶ್ರೀಗಳ ಪಾದಪೂಜೆ ಕಾರ್ಯಕ್ರಮ ನಡೆಯಿತು. ಯಲಕಪಳ್ಳಿ ಸೇರಿದಂತೆ ವಿವಿಧ ಭಾಗದ ಭಕ್ತರು ಶ್ರೀಗಳ ದರ್ಶನ ಭಾಗ್ಯ ಪಡೆದರು





