ಆನೆ ಕದ್ದರು ಕಳ್ಳ – ಅಡಿಕೆ ಕದ್ದರೂ ಕಳ್ಳ” ತಪ್ಪಿತಸ್ಥ ಸರ್ಕಾರಿ ನೌಕರರ ಮೇಲೆ ಕಟ್ಟುನಿಟ್ಟಿನ ಕ್ರಮ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಕಲಬುರಗಿ, ಜನವರಿ 05 (ಕರ್ನಾಟಕ ವಾರ್ತೆ): ಕಾನೂನಿನಲ್ಲಿ ಸರ್ಕಾರಿ ನೌಕರರ ಪ್ರತಿ ತಪ್ಪಿಗೂ ತನ್ನದೇ ಆದ ಶಿಕ್ಷೆ ಇದೆ, ಎಲ್ಲಾ ಕಳ್ಳರನ್ನು ಒಂದೇ ತಕ್ಕಡಿಯಲ್ಲಿ ತೂಗುವುದಿಲ್ಲ, “ಆನೆ ಕದ್ದರು ಕಳ್ಳ – ಅಡಿಕೆ ಕದ್ದರೂ ಕಳ್ಳ” ಆಗುವ ಕಾರಣಕ್ಕೆ ತಪ್ಪಿತಸ್ಥ ಸರ್ಕಾರಿ ನೌಕರರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಅವರು ಸರ್ಕಾರಿ ನೌಕರರಿಗೆ ಎಚ್ಚರಿಕೆ ನೀಡಿದರು ನಗರದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿಂದು ಹಮ್ಮಿಕೊಳ್ಳಲಾಗಿದ್ದ “ಕಲಬುರಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ” ಉದ್ದೇಶಿಸಿ ಮಾತನಾಡಿದ ಅವರು ಲೋಕಾಯುಕ್ತ ಬೆಂಗಳೂರಿನ ಕೇಂದ್ರ ಕಚೇರಿಯಿಂದ ರಾಜ್ಯದಲ್ಲಿ ವಲಯವಾರು ನೇರ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದ್ದು, ಜನವರಿ 2 ರಿಂದ ಇಂದಿನವರೆಗೆ ಬೀದರ್, ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಗಳಲ್ಲಿ ವಿವಿಧ ಇಲಾಖೆಗಳ ತಪಾಸಣೆ ಮಾಡಲಾಗಿದೆ ಎಂದರು. ಇಬ್ಬರೂ ನ್ಯಾಯಾದೀಶರನ್ನು ಒಳಗೊಂಡಂತೆ ಒಬ್ಬ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ, 5 ಅಪರ ಪೊಲೀಸ್ ವರಿಷ್ಠಾಧಿಕಾರಿಗಳು, 16 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮತ್ತು 26 ಪೊಲೀಸ್ ಸಿಬ್ಬಂದಿ ಒಳಗೊಂಡ ಒಟ್ಟು 48 ಅಧಿಕಾರಿಗಳನ್ನು 8 ತಂಡಗಳನ್ನಾಗಿ ವಿಂಗÀಡಿಸಿ ಒಟ್ಟು 5 ದಿನಗಳ ಕಾಲ ಈ ನಾಲ್ಕು ಜಿಲ್ಲೆಗಳ ವಿವಿಧ ತಾಲ್ಲೂಕುಗಳಲ್ಲಿ ತಪಾಸಣೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಸಾರ್ವಜನಿಕರಿಗೆ ವಿವಿಧ ಸೇವೆ ನೀಡುವ 2 ತಾಲ್ಲೂಕು ಕಚೇರಿಗಳು, 2 ನೊಂದಣಾಧಿಕಾರಿಗಳ ಕಚೇರಿ, 105 ವಿವಿಧ ವಿದ್ಯಾರ್ಥಿ ವಸತಿ ನಿಲಯಗಳು, 5 ವಸತಿ ಸಹಿತ ಶಾಲೆಗಳು, 2 ಶಿಕ್ಷಣಾಧಿಕಾರಿಗಳ ಕಚೇರಿ, 2 ಅಗ್ನಿ ಶಾಮಕ ಕಚೇರಿ, 2 ರಸ್ತೆ ಸಾರಿಗೆ ಕಚೇರಿ ಸೇರಿದಂತೆ 7 ವಿವಿಧ ಸ್ಥಳೀಯ ಕಾರ್ಪೊರೇಷನ್, ವಿಭಾಗೀಯ ಅಧಿಕಾರಿಗಳ ಕಚೇರಿ ಸೇರಿದಂತೆ ಇತರೆ ಕೆಲವು ಕಚೇರಿಗಳ ತಪಾಸಣೆಯನ್ನು ನಡೆಸಲಾಗಿದೆ. ಇಂದು ಮತ್ತು ನಾಳೆ ಸಹ ತಪಾಸಣೆ ಮುಂದುವರೆಯಲಿದೆ ಎಂದರು





