ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಅಫಜಲಪೂರ ಪಟ್ಟಣಕ್ಕೆ ಹಂಚಿಕೆಯಾದ 2 ನೂತನ ಬಸ್ಗಳಿಗೆ ಅಫಜಲಪೂರ ಶಾಸಕರಾದ ಎಂ.ವೈ.ಪಾಟೀಲ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ವೈ.ಪಾಟೀಲ ಅವರು ನೂತನ ಬಸ್ಗಳಿಗೆ ಭಾನುವಾರದಂದು ಚಾಲನೆ ನೀಡಿದರು ಸಾರ್ವಜನಿಕರಿಗೆ, ಸುಗಮ ಸುರಕ್ಷಿತ ಹಾಗೂ ಸಮಯಕ್ಕೆ ಸರಿಯಾಗಿ ಸಾರಿಗೆ ಸೇವೆ ಒದಗಿಸಲಾಗುವುದು. ನಿಗಮದ ಮುಖ್ಯ ಆದ್ಯತೆಯಾಗಿದ್ದು, ಅದರ ಭಾಗವಾಗಿ ಈ ನೂತನ ನಗರ ಸಾರಿಗೆ ಸೇವೆಯನ್ನು ಪ್ರಾರಂಭಿಸಲಾಗಿದೆ. ಈ ಸೇವೆಯಿಂದ ಅಫಜಲಪೂರ ಸಾರ್ವಜನಿಕ ವಿದ್ಯಾರ್ಥಿಗಳಿಗೆ ಹಾಗೂ ದೈನಂದಿನ ಪ್ರಯಾಣದಲ್ಲಿ ಉದ್ಯೋಗಸ್ಥರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಶಾಸಕರಾದ ಎಂ.ವೈ. ಪಾಟೀಲ ಹೇಳಿದರು ಜನಸೇವೆಯೇ ನಮ್ಮ ಧ್ಯೇಯ ಸುಗಮ ಸಾರಿಗೆಯೇ ನಮ್ಮ ಸಂಕಲ್ಪ, ಈ ಆಶಯದೊಂದಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಜನಪರ ಹಾಗು ವಿಶ್ವಾಸಾರ್ಹ ಸಾರಿಗೆ ಸೇವೆಯನ್ನು ನಿರಂತರವಾಗಿ ಮುಂದುವರೆಯಲಿದೆ ಎಂದು ಅವರು ತಿಳಿಸಿದರು ಈ ಸಂದರ್ಭದಲ್ಲಿ ಅಫಜಲಪೂರ ತಹಶೀಲ್ದಾರರಾದ ಸಂಜುಕುಮಾರ ದಾಸರ್, ಸಂಸ್ಥೆಯ ಘಟಕ ವ್ಯವಸ್ಥಾಪಕರಾದ ಅಮೀನಪ್ಪ ಭೋವಿ, ಪಕ್ಷದ ಹಿರಿಯ ಮುಖಂಡರು, ಯುವ ಮುಖಂಡರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿದ್ದರು





