Google search engine
ಮನೆUncategorizedಮೃತ ನೌಕರನ ಪತ್ನಿಗೆ ಸಿಕ್ತು ಅನುಕಂಪದ ನೌಕರಿ: ಜಿಲ್ಲಾ ಪಂಚಾಯತ್ ಸಿ.ಇ.ಓ ನಿಂದ ನೇಮಕಾತಿ ಆದೇಶ...

ಮೃತ ನೌಕರನ ಪತ್ನಿಗೆ ಸಿಕ್ತು ಅನುಕಂಪದ ನೌಕರಿ: ಜಿಲ್ಲಾ ಪಂಚಾಯತ್ ಸಿ.ಇ.ಓ ನಿಂದ ನೇಮಕಾತಿ ಆದೇಶ ಪತ್ರ ವಿತರಣೆ

ಮೃತ ನೌಕರನ ಪತ್ನಿಗೆ ಸಿಕ್ತು ಅನುಕಂಪದ ನೌಕರಿ: ಜಿಲ್ಲಾ ಪಂಚಾಯತ್ ಸಿ.ಇ.ಓ ನಿಂದ ನೇಮಕಾತಿ ಆದೇಶ ಪತ್ರ ವಿತರಣೆ

ಮೃತ ನೌಕರನ ಪತ್ನಿಗೆ ಸಿಕ್ತು ಅನುಕಂಪದ ನೌಕರಿ: ಜಿಲ್ಲಾ ಪಂಚಾಯತ್ ಸಿ.ಇ.ಓ ನಿಂದ ನೇಮಕಾತಿ ಆದೇಶ ಪತ್ರ ವಿತರಣೆ ಕಲಬುರಗಿ,ಡಿ.13(ಕರ್ನಾಟಕ ವಾರ್ತೆ) ಚಿತ್ತಾಪುರ ತಾಲೂಕಿನ ಆಲೂರ(ಬಿ) ಗ್ರಾಮ ಪಂಚಾಯತಿಯಲ್ಲಿ ದ್ಚಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಿ.ಶೀನಪ್ಪ ಬಸವರಾಜ ಅವರು ರಸ್ತೆ ಅಪಘಾತವೊಂದರಲ್ಲಿ ದುರ್ಮರಣ ಹೊಂದಿದ್ದರಿಂದ ಅವರ ಧರ್ಮಪತ್ನಿ ಸುಜಾತಾ ದಿ. ಶೀನಪ್ಪ ಅವರಿಗೆ ಶುಕ್ರವಾರ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಅವರು ಅನುಕಂಪ ಆಧಾರದ ಮೇಲೆ ಸರ್ಕಾರಿ ನೌಕರಿಯ ನೇಮಕಾತಿ ಆದೇಶ ಪತ್ರ ವಿತರಿಸಿದರು ದಿ.ಶೀನಪ್ಪ ತಂದೆ ಬಸವರಾಜ ಅವರು ಸೇವೆಯಲ್ಲಿರುವಾಗಲೆ ಆಕಸ್ಮಿಕ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದರು. ಸರ್ಕಾರದ ನಿಯಮಾವಳಿಯಂತೆ ಚಿತ್ತಾಪುರ ತಾಲೂಕಾ ಪಂಚಾಯತ್ ಇ.ಓ ಅವರ ಪ್ರಸ್ತಾವನೆ ಮೇರೆಗೆ ಮೃತ ನೌಕರರ ಧರ್ಮಪತ್ನಿ ಸುಜಾತಾ ಗಂಡ ದಿ.ಶೀನಪ್ಪ ಅವರನ್ನು ಸೇಡಂ ತಾಲೂಕಿನ ಮಳಖೇಡ ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿ ಆದೇಶಿಸಿದೆ ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ ಇದ್ದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!