Google search engine
ಮನೆUncategorizedಕಾಳಗಿ ಪಟ್ಟಣದಲ್ಲಿ ಪ್ರಗತಿ ಪರಿಶೀಲನೆ ಸಭೆ ಜರುಗಿತು

ಕಾಳಗಿ ಪಟ್ಟಣದಲ್ಲಿ ಪ್ರಗತಿ ಪರಿಶೀಲನೆ ಸಭೆ ಜರುಗಿತು

ಕಾಳಗಿ ಪಟ್ಟಣದಲ್ಲಿ ಪ್ರಗತಿ ಪರಿಶೀಲನೆ ಸಭೆ ಜರುಗಿತು

ಕಾಳಗಿ ಪಟ್ಟಣದಲ್ಲಿ ಪ್ರಗತಿ ಪರಿಶೀಲನೆ ಸಭೆ ಜರುಗಿತು ಕಾಳಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಕಾಳಗಿ ಸಭಾಂಗಣದಲ್ಲಿ ಶಾಸಕರಾದ ಅವಿನಾಶ ಜಾಧವ ಇವರ ಘನ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನ ಸಭೆ ಮತ್ತು 2026- 27 ನೇ ಸಾಲಿನ ತಾಲೂಕಿನ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ಸಭೆ ಜರುಗಿತು.ಈ ಸಭೆಯಲ್ಲಿ ಜಿಲ್ಲಾ ಪಂಚಾಯತ ನಿಂದ ಎರಡು ಕೋಟಿ 35 ಲಕ್ಷ ರೂಪಾಯಿ ಸಂಪೂರ್ಣ ಅನುದಾನವನ್ನು ಚಿತ್ತಾಪುರ ಮತ್ತು ಸೇಡಂ ಗೆ ಬಳಸಿಕೊಂಡು ಕಾಳಗಿ ಪಟ್ಟಣಕ್ಕೆ ಶೂನ್ಯ ಅನುದಾನ ತಾರತಮ್ಯ ವಹಿಸಿದ್ದಕ್ಕೆ ಶಾಸಕ ಅವಿನಾಶ್ ಜಾಧವ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಹಾಗೆ ಕಾಳಗಿ ಪಟ್ಟಣದ ಪ್ರಗತಿಗಾಗಿ ಪ್ರಜಾಸೌಧ ಕಟ್ಟಡ ಪ್ರಾರಂಭವಾಗಿ ಕೆಲವು ದಿನಗಳಲ್ಲಿ ತಗಿತಗೊಂಡಿರುವುದಕ್ಕೆ ಪ್ರಶ್ನೆ ಕೇಳಿದಾಗ ಎಇಇ ಅಧಿಕಾರಿಗಳು ಸುಮ್ಮನೆ ಕುಳಿತ ಪ್ರಸಂಗ ಜರುಗಿತು.ಈ ಸಂದರ್ಭದಲ್ಲಿ ತಹಸಿಲ್ದಾರ್ ಪೃಥ್ವಿರಾಜ ಪಾಟೀಲ.ಜಿಲ್ಲಾ ಪಂಚಾಯತ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ.ತಾಲೂಕ ಪಂಚಾಯತ ಇಒ ಬಸಲಿಂಗಪ್ಪ ಡಿಗ್ಗಿ.ಪಟ್ಟಣ ಪಂಚಾಯತ ಮುಖ್ಯ ಅಧಿಕಾರಿ ಪಂಕಜಾ ಎ. ಸಿಪಿಐ ಜಗದೇವಪ್ಪ ಪಾಳಾ ತಾಲೂಕಿನ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರುಪ್ರಸಾದ್ ಹಳ್ಳಿ SSVTV ನ್ಯೂಸ್ ಕಾಳಗಿ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!