ಚಿಂಚೋಳಿ ತಾಲೂಕಿನ ಗಡಿಭಾಗ ಮಿರಿಯಾಣ ಚೆಕ್ ಪೋಸ್ಟ ನಲ್ಲಿ 05ಲಕ್ಷ ಮೌಲ್ಯದ ವಾಹನ ಮತ್ತು 1.35 ಲಕ್ಷ ಮೌಲ್ಯದ ತಂಬಾಕು ಸಿಗರೇಟ ಪೊಲೀಸರ ವಶಕ್ಕೆ
ಚಿಂಚೋಳಿ ತಾಲೂಕಿನ ಮಿರಿಯಾಣ ಚೆಕ್ ಪೋಸ್ಟ್ ನಲ್ಲಿ ತೆಲಂಗಾಣದ ತಾಂಡೂರದಿಂದ ದಾಖಲೆ ಇಲ್ಲದೆ ಅಕ್ರಮವಾಗಿ ವಿವಿಧ ಕಂಪನಿಯ ತಂಬಾಕು ಮತ್ತು ಸಿಗರೇಟಗಳು ಚಿಂಚೋಳಿಗೆ ಸಾಗುತ್ತಿರುವ ಸಂದರ್ಭದಲ್ಲಿ ಮೀರಿಯಣ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ವಶಕ್ಕೆ ಪಡೆಯಲಾಯಿತು.
ಲೋಕಸಭೆ ಚುನಾವಣೆ ನಿಮಿತ್ಯ ತೆಲಂಗಾಣ ಗಡಿಭಾಗ ಕ್ಕೆ ಹೊಂದಿಕೊಂಡಿರುವ ಮಿರಿಯಾಣ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ಮಾಡಿದಾಗ ಅಕ್ರಮ ತಂಬಾಕು ಮತ್ತು ಸಿಗರೇಟಗಳನ್ನು ಕೊಂಡೋಯುತ್ತಿರುವ ಹುಂಡ್ಯ ಕ್ರೆಟ ವಾಹನದಲ್ಲಿ ಪತ್ತೆಯಾಗಿದ್ದು ಅಂದಾಜು 1,35 ಲಕ್ಷ ರೂ. ಮೊತ್ತದ ತಂಬಾಕು ಮತ್ತು ಸಿಗರೇಟ ಹಾಗೂ 05 ಲಕ್ಷ ರೂ ಮೌಲ್ಯದ ವಾಹನ ವಶಕ್ಕೆ ಪಡೆಯಲಾಗಿದೆ ಮಿರಿಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್ಐ ಶಿವರಾಜ್ ಪಾಟೀಲ ತಿಳಿಸಿದ್ದಾರೆ.
ಪಿಎಸ್ಐ ಶಿವರಾಜ್ ಪಾಟೀಲ, ಪಿಎಸ್ಐ ಕಾಶೀನಾಥ್, ಆನಂದ್ ಫೌಜಿ, ಮಲ್ಲಿಕಾರ್ಜುನ್, ಬದ್ದು ರಾಠೋಡ್, ಪಿಡಬ್ಲ್ಯೂಡಿ ಸಿಬ್ಬಂದಿಗಳು, ಪಂಚಾಯತ್ ಸಿಬ್ಬಂದಿಗಳು, ಗೃಹ ರಕ್ಷಕದಳ ದವರು ಇನ್ನಿತರ ಅಧಿಕಾರಿಗಳು ಇದ್ದರು.