Google search engine
ಮನೆಬಿಸಿ ಬಿಸಿ ಸುದ್ದಿಗುರುಮಠಕಲ್ ಮತಕ್ಷೇತ್ರಕ್ಕೆ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಭೇಟಿ

ಗುರುಮಠಕಲ್ ಮತಕ್ಷೇತ್ರಕ್ಕೆ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಭೇಟಿ

ಮತಗಟ್ಟೆ,ಚೆಕ್ ಪೋಸ್ಟ್ ಪರಿಶೀಲನೆ

ಕಲಬುರಗಿ,ಮಾ.2 8(ಕ.ವಾ) ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಗುಲಬರ್ಗಾ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಯಾದಗಿರಿ ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಯ ವಿವಿಧ ಮತಗಟ್ಟೆಗಳಿಗೆ, ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಗುರುಮಠಕಲ್ ಕ್ಷೇತ್ರದ ಯರಗೋಳ ಚೆಕ್‌ಪೋಸ್ಟ್ ಭೇಟಿ ನೀಡಿ ಗ್ರಾಮದಲ್ಲಿನ ಮತಗಟ್ಟೆ ಸಂಖ್ಯೆ 2 ಮತ್ತು 3ಕ್ಕೆ‌ ಭೇಟಿ‌ ನೀಡಿ ಮತದಾನಕ್ಕೆ ಮಾಡಿಕೊಂಡಿರುವ ಸಿದ್ಧತೆ, ಮೂಲಸೌಕರ್ಯ ಪರಿಶೀಲಿಸಿದರು. ನಂತರ ಮೋಟನಳ್ಳಿ, ಗಾಜರಕೋಟ್ ಗ್ರಾಮದಲ್ಲಿ ಕ್ರಮವಾಗಿ 13, 15 ವಲನರೇಬಲ್ ಮತಗಟ್ಟೆ ವೀಕ್ಷಿಸಿದರು.

ಇದಲ್ಲದೆ ಕೇಶ್ವಾರ ಕ್ರಿಟಿಕಲ್ ಮತಗಟ್ಟೆ ಸಂ.139 ವೀಕ್ಷಿಸಿದರು. ಪುಟಪಾಕ್ ಕ್ರಿಟಿಕಲ್ ಮತಗಟ್ಟೆ ಸಂ.141 ಹಾಗೂ ಚೆಕ್ ಪೋಸ್ಟ್ ಪರಿಶೀಲಿಸಿದರು. ನಂತರ ಕುಂಟಿಮರಿ ಚೆಕ್ ಪೋಸ್ಟ್, ಕೊಂಕಲ್‌ ವಲನರೇಬಲ್ ಮತಗಟ್ಟೆ ಸಂ. 166, 167, 168, 169 ಮತಗಟ್ಟೆ ವೀಕ್ಷಿಸಿದರು.

ಗುರುಮಠಕಲ್ ತಹಶೀಲ್ದಾರ ಕಚೇರಿಗೂ ಭೇಟಿ:

ಜಿಲ್ಲಾ‌ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಗುರುಮಠಕಲ್ ತಹಶೀಲ್ದಾರ ಕಚೇರಿಗೆ ಭೇಟಿ‌ ನೀಡಿ ಸ್ಟ್ರಾಂಗ್ ರೂಂ, ತರಬೇತಿ ಕೇಂದ್ರ ಸಹ‌ ವೀಕ್ಷಣೆ ಮಾಡಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!