ಮನೆಯ ಮುಂಭಾಗದಲ್ಲಿ ಅಪಘಾತಗೊಂಡ ಶ್ವಾನಕ್ಕೆ ಓಡೋಡಿ ಹೋಗಿ ನೀರಾದರೂ ತಂದು ಹಾಕುವ ಜನ, ಆನೆಯ ಸಾವಿನ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇದಕ್ಕೆ ಕಾರಣ, ಆನೆ ಮತ್ತು ಮನುಷ್ಯರ ನಡುವೆ ಹೆಚ್ಚಿರುವ ಸಂಘರ್ಷ! ಅಧ್ಯಯನವೊಂದರ ಪ್ರಕಾರ, 2019 ರಿಂದ 2023 ರಲ್ಲಿ ಮಾನವ ಮತ್ತು ವನ್ಯಜೀವಿಗಳ ನಡುವೆ 34 ಸಾವಿರ ಸಂಘರ್ಷದ ಘಟನೆಗಳು ನಡೆದಿವೆ. ಅದರಲ್ಲಿ ಶೇ.74.82 ರಷ್ಟು ಆನೆ ಮತ್ತು ಮನುಷ್ಯರ ನಡುವೆ ಏರ್ಪಟ್ಟಿವೆ. ಇನ್ನೊಂದು ಆತಂಕದ ವಿಚಾರವೆಂದರೆ, ಕಳೆದ ಐದು ವರ್ಷಗಳಲ್ಲಿ ಸಂಘರ್ಷದ ಪ್ರಮಾಣ ಶೇ.183 ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಆನೆಯೆಂದರೆ ಪೂಜ್ಯ ಭಾವನೆ ಇದೆ. ಆದರೆ, ಛಿದ್ರಗೊಂಡ ಕಾರಿಡಾರ್, ಕಾಡಿನೊಳಗೆ ಆಹಾರ, ನೀರಿನ ಕೊರತೆ ಹಾಗೂ ನಿರಂತರ ಕಾಡು ನಾಶದಿಂದಾಗಿ ಆವಾಸಸ್ಥಾನ ಕಳೆದುಕೊಂಡು ಕಾಡಾನೆಗಳು ನಾಡಿಗೆ ನುಗ್ಗುತ್ತಿವೆ. ಇದರಿಂದಾಗಿ ಕಾಡಂಚಿನಲ್ಲಿರುವ ಜನರ ದೃಷ್ಟಿಯಲ್ಲಿ ಕಾಡಾನೆ ‘ವಿಲನ್’ ಆಗಿ ಮಾರ್ಪಟ್ಟಿದೆಮನುಷ್ಯರ ಮತ್ತು ಕಾಡಾನೆಗಳ ನಡುವಿನ ಸಂಘರ್ಷವನ್ನು ತಗ್ಗಿಸುವಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸಬೇಕಾದ ಅರಣ್ಯ ಇಲಾಖೆ ‘ಸೆರೆ’ ಕಾರ್ಯಾಚರಣೆಗಷ್ಟೇ ಸೀಮಿತವಾಗಿದೆ ಎಂಬ ಆರೋಪಗಳಿವೆ. ಪಶ್ಚಿಮಘಟ್ಟಗಳ ವ್ಯಾಪ್ತಿಯ ತಮಿಳುನಾಡಿನಲ್ಲಿಯೂ ಆನೆ- ಮಾನವ ಸಂಘರ್ಷವಿದೆ. ಅಲ್ಲಿಯೂ ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸುವ ಪರಿಪಾಠವೊಂದೇ ಪರಿಹಾರ ಎಂಬ ಮನಸ್ಥಿತಿ ಇತ್ತು. ಆದರೆ, ಮೈಸೂರಿನ ನೇಚರ್ ಕನ್ಸರ್ವೇಷನ್ ಫೌಂಡೇಷನ್ ಎಂಬ ಸ್ವಯಂಸೇವಾ ಸಂಸ್ಥೆಯು ಆನೆಗಳು ನಡೆದಾಡುವ ಪಥ, ಗುಂಪುಗಳು ಯಾವ ಸಮಯದಲ್ಲಿಎಲ್ಲಿ ಇರುತ್ತವೆ ಈ ಬಗ್ಗೆ ಕೂಲಂಕಷವಾಗಿ ಅಧ್ಯಯನ ನಡೆಸಲಾಗಿತ್ತುತಮಿಳುನಾಡಿನ ವಾಲ್ಪರೈ ವ್ಯಾಪ್ತಿಯ 102 ಹಳ್ಳಿಗಳ ನಿವಾಸಿಗಳಿಗೆ ಮತ್ತು ಅತಿಹೆಚ್ಚು ಸಂಘರ್ಷಕ್ಕೆ ಗುರಿಯಾಗುವ ಪ್ರದೇಶಗಳಲ್ಲಿನ ಜನರಿಗೆ ಕಾಡಾನೆ ಚಲನವಲನದ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡುವ ಪದ್ಧತಿಯನ್ನು ಪರಿಚಯಿಸಲಾಯಿತು. ಇದು ಯಶಸ್ವಿಯಾಗಿ ಈ ಭಾಗದಲ್ಲಿಕಳೆದ ಎರಡು ದಶಕಗಳಲ್ಲಿಕಾಡಾನೆಯ ದಾಳಿಗೆ ಒಬ್ಬರು ಮಾತ್ರ ಬಲಿಯಾಗಿದ್ದಾರೆ. ಹೀಗಾಗಿ, ವಾಲ್ಪರೈ ಭಾಗದ ಜನರಲ್ಲಿಈಗ ಆನೆಯೆಂದರೆ, ರೇಸಿಗೆ ಬದಲು ಆರಾಧನೆಯ ಭಾವ ಸೃಷ್ಟಿಯಾಗಿದೆ





