ಸ್ಲಗ್: ಬಸ್ ಗಾಗಿ ವಿದ್ಯಾರ್ಥಿಗಳ ಕಣ್ಣೀರು
ಆ್ಯಂಕರ್: ಶಾಲಾ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದೇ ಹಾಗೇ ತೆರಳಿರುವ ಕಂಡಕ್ಟರ್, ಡ್ರೈವರ್ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಟೋಕಾಪುರ ಗ್ರಾಮದ ವಿದ್ಯಾರ್ಥಿಗಳು ನಿತ್ಯ ಪ್ರೌಢ ಶಾಲೆ ಕನ್ಯಾಕೊಳುರು ಗ್ರಾಮಕ್ಕೆ ತೆರಳಬೇಕು. ಹೀಗಾಗಿ ಸುಮಾರು ಐದು ಕಿಲೋಮೀಟರ್ ಅಂತರದಲ್ಲಿರುವ ಕನ್ಯಾಕೊಳುರು ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಏಕೈಕ ಬಸ್ ವ್ಯವಸ್ಥೆ ಇದೆ. ಒಂದೊಂದು ಭಾರೀ ಆ ಬಸ್ ಸಹ ನಿಲ್ಲಿಸದೇ ಚಾಲಕ, ಕಂಡಕ್ಟರ್ ಹಾಗೇ ತೆರಳ್ತಾರೆ. ಈ ವೇಳೆ ವಿದ್ಯಾರ್ಥಿಗಳು ನಡೆದುಕೊಂಡೆ ಶಾಲೆಗೆ ಹೋಗಬೇಕಾಗಿದೆ. ಇದರಿಂದ ಸಿಡುದೆದ್ದ ಗ್ರಾಮಸ್ಥರು ಬಸ್ ಗೆ ಅಡ್ಡಹಾಕಿ ಡ್ರೈವರ್, ಕಂಡಕ್ಟರ್ ತರಾಟೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ವಿದ್ಯಾರ್ಥನಿಯರು ಹೆಚ್ಚಿನ ಬಸ್ ವ್ಯವಸ್ಥೆ ಮಾಡಬೇಕು ಅಂತ ಕಣ್ಣೀರು ಹಾಕಿದ್ದಾರೆ.