ಕೇಂದ್ರ ಸರ್ಕಾರದ ಪಡಿತರ ಮೂಲಕ ನೀಡುವ ಐದು ಕೆಜಿ ಉಚಿತ ಅಕ್ಕಿ, ಜಲ ಜೀವನ್ ಮಿಷನ್ ಯೋಜನೆಯನ್ನು ತಮ್ಮದೆಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ’ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ವಾಗ್ದಾಳಿ ನಡೆಸಿದರು. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಿಂದ ರೈತರಿಗೆ ಬರ ಪರಿಹಾರ ನೀಡದೆ ಕೇಂದ್ರದತ್ತ ಬೊಟ್ಟು ಮಾಡಿಕೊಂಡು ಕುಳಿತಿದ್ದಾರೆ. ಮೊದಲು ರಾಜ್ಯ ಸರ್ಕಾರ ಬಿಡುಗಡೆ ಮಾಡಿ ನಂತರ ಕೇಂದ್ರದಿಂದ ಪಡೆಯಬೇಕು ಎಂದರು.





