ಇಂದು ಕಲಬುರ್ಗಿ ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಆಡಿಟೋರಿಯಂ ಭವನದಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಅಮರ್ನಾಥ್ ಪಾಟೀಲ್ ಅವರ ಪರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ರು ಚುನಾವಣೆ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು ನಂತರ ಅತಿಥಿಗಳಿಗೆ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಹಾಗೂ ಅಮರ್ನಾಥ್ ಪಾಟೀಲ್ ಅವರು ಮಾತನಾಡಿದರು.
ಸಂಸ್ಥೆ ಅಧ್ಯಕ್ಷ ಶಶೀಲ ನಮೋಶಿ, ಬಿ.ಜಿ ಪಾಟೀಲ, ಎನ್.ರವಿಕುಮಾರ.ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ಚಂದು ಪಾಟೀಲ,ಸುನೀಲ ವಲ್ಲಾಪುರೆ.ರಾಜಾಭೀಮಳ್ಳಿ, ಉದಯಕುಮಾರ ಚಿಂಚೋಳಿ,ಕ್ಯಾಡ್ ಮ್ಯಾಕ್ಸ್ ಸಂಸ್ಥೆ ಚೇರ್‌ಮನ್ ಅರುಣಕುಮಾರ ಪಾಟೀಲ, ಶಿವರಾಜ ಪಾಟೀಲ ರದ್ದೇವಾಡಗಿ ಸೇರಿದಂತೆ ಸಂಸ್ಥೆ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು