ಮಂಗಳೂರಿನಲ್ಲಿ ರಸ್ತೆಯಲ್ಲೇ ನಮಾಜ್ ಮಾಡಿರುವ ಘಟನೆ ಕುರಿತು ಬಿಜೆಪಿ ನಾಯಕ ನಳೀನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ.
ಟ್ವಿಟ್ ಮಾಡಿದ ಅವರು, ರಸ್ತೆಯನ್ನು ಬ್ಲಾಕ್ ಮಾಡಿ, ನಮಾಜು ಮಾಡುತ್ತಾ, ವಾಹನ ಸಂಚಾರಕ್ಕೆ, ಪಾದಚಾರಿಗಳಿಗೆ ಅಡ್ಡಿಪಡಿಸುವ ಮಟ್ಟಕ್ಕೆ ಪರಿಸ್ಥಿತಿ ತಲುಪಿರುವುದು ಸರಕಾರದ ಶ್ವೇಚ್ಚಾಚಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ ನಾವು ಕಾನೂನು, ನೀತಿ, ನಿಯಮ ಯಾವುದನ್ನು ಕೇರ್ ಮಾಡುವುದಿಲ್ಲ ಎನ್ನುವ ಧೋರಣೆ ಕೆಲವರಲ್ಲಿ ಸೃಷ್ಟಿಯಾಗಲು, ಸರಕಾರ ಅಂತವರ ಮೇಲೆ ತೋರಿಸುತ್ತಿರುವ ವಿಶೇಷ ‘ಪ್ರೀತಿ’ ಯೇ ಕಾರಣ ಎಂದು ಆರೋಪಿಸಿದ್ದಾರೆ





