ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಹೊಲದಲ್ಲಿ ಮಳೆ ಗಾಳಿಯಿಂದ ಬಚವಾಗಲು ಗಿಡದ ಕೆಳಗೆ ಆಶ್ರಯ ಪಡೆತ್ತಿದ್ದಾಗ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ.
ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಕುನ್ನೂರ್ ರೋಡ್ ಬಿರ್ಲಾ ಕ್ವಾಟ್ರಸ್ ಏರಿಯಾದ ನಿವಾಸಿ ಸತೀಶ್ ಪೆರ್ಲಾದ್ ಸೆಳಕೆ (40) ಇನ್ನೊಬ್ಬರು ವಾಡಿ ಪಟ್ಟಣದ ರೈಲ್ವೆ ಕಾಲನಿಯಾ ಹನುಮಾನ್ ನಗರದ ಪ್ರಕಾಶ್ ಏತ್ನಾಳ್ ವಾಗ್ಮೊರಿ (50) ಎಂದು ಗುರುತಿಸಲಾಗಿದೆ.
ಮೃತಪಟ್ಟ ಸತೀಶ್ ಹಾಗೂ ಪ್ರಕಾಶ್ ಇವರು ಸತೀಶಗೆ ಸೇರಿದ ಅವರ ಹೊಲ ನೋಡಿಕೊಂಡು ನಾಲವಾರ ಗ್ರಾಮದಿಂದ ಮರಳಿ ವಾಡಿ ಪಟ್ಟಣಕ್ಕೆ ಬರುವಾಗ ಏಕೈಕ ಬಿಸುತ್ತಿದ್ದ ಮಳೆ ಹಾಗೂ ಗಾಳಿಯಿಂದ ಬಚವಾಗಲು ರಾಷ್ಟ್ರೀಯ ಹೆದ್ದಾರಿ ಪಕ್ಕದ ಹೊಲದಲ್ಲಿ ನಿಂತಿರುವಾಗ ಸಿಡಿಲು ಬಡೆದು ಮೃತಪಟ್ಟಿದ್ದಾರೆ





