ವಿಜಯಪುರ ಮೀಸಲು ಲೋಕಸಭಾ ಚುನಾವಣೆ ಬಿಸಿಲನಡುವೆಯು ಭರ್ಜರಿ ಪ್ರಚಾರ…ವಿಜಯಪುರ ಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರು ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ.
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಭಂಟನೂರ, ಪೀರಾಪುರ, ಹಾಗೂ ಶಳ್ಳಗೀ ಸೇರಿದಂತೆ ಅನೇಕ ಗ್ರಾಮಗಳಲ್ಲಿ ದೇವರ ಹಿಪ್ಪರಗಿ ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರು ಜಿಗಜಿಣಗಿ ಪರ ಪ್ರಚಾರ ಮಾಡಿದರು.
ವಿಜಯಪುರ ಮೀಸಲು ಮತಕ್ಷೇತ್ರ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದು,
ಅದೆ ರೀತಿ ಕೇಂದ್ರ ಸರಕಾರವು ಅನೇಕ ಅಭಿವೃದ್ಧಿ ಕಾರ್ಯ ಮಾಡಿದೆ.ಮತ್ತೆ ಮೋದಿ ಅವರನ್ನು ಪಿಎಂ ಮಾಡಲು ಬಿಜೆಪಿ ಅಭ್ಯರ್ಥಿಯನ್ನು ಹೆಚ್ಚು ಮತಗಳಿಂದ ಗೆಲ್ಲಿಸಬೇಕೆಂದರು. ಅವರು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಪ್ರಚಾರ ಮಾಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪ್ರಭುಗೌಡ ಬಿರಾದಾರ , ಸಂಗನಗೌಡ ಹೇಗರೆಡ್ಡಿ, ಶಿಲ್ಪಾ ಕೂದರಗುಂಡ, ಬಸನಗೌಡ ಬಿರಾದಾರ, ಕಾಶಿರಾಯಗೌಡ ಬಿರಾದಾರ, ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು,





