ಕಲಬುರಗಿ ನಗರದ ಗುಲ್ಬರ್ಗ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ವಿದ್ಯಾರ್ಥಿನಿಯರ ಹಾಸ್ಟೇಲ್ ಎದುರಿಗೆ ಹಲವು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ NSUI ಉಪಾದ್ಯಕ್ಷೆ ಸಂಪೂರ್ಣ ಪಾಟೀಲ್ ಮಾತನಾಡಿ ಇಲ್ಲಿನ ವಾರ್ಡನ್’ರವರಾದ ರೂಪಾ ಮೇಡಂ ಅವರು ವಿದ್ಯಾರ್ಥಿನಿಯರಿಗೆ ಸರಿಯಾದ ಊಟದ ವ್ಯವಸ್ಥೇ ಮಾಡುತ್ತಿಲ್ಲ, ಹಾಗೆಯೇ ಊಟದ ಮೆನ್ಯೂನಂತೆ ಊಟ ನೀಡಲ್ಲ, ಆರೋಗ್ಯ ಹದಗೆಟ್ಟಾಗ ವೈದ್ಯಕೀಯ ಚಿಕಿತ್ಸೆಗೆಂದು ಹೊರಗಡೆ ಹೋದರೆ ಇವರು ಬೇರೊಂದು ಹುಡುಗರ ಜೊತೆ ಓಡಾಡುತ್ತಿದ್ದಾರೆ ಎಂದು ಮನೆಯವರ ಮುಂದೆ ಆರೋಪಿಸುತ್ತಾರೆ. ಊಟದ ಬಗ್ಗೆ ಕೇಳಿದರೆ ನೀವು ಊಟ ಮಾಡಲು ಬಂದಿದ್ದೀರೋ ಅಥವಾ ಓದಲು ಬಂದಿದ್ದೀರೋ? ಎಂದು ಪ್ರಶ್ನಿಸುತ್ತಾರೆ ಎಂದು ಆರೋಪಿಸಿದರು.





