ತಾಲೂಕು ಪಂಚಾಯಿತಿ ಆವರಣದಿಂದ ಕಾಲುನಡಿಗೆಯ ಮೂಲಕ ಚುನಾವಣೆ ವಾಕ್ಯಗಳನ್ನು ಕೂಗುತ್ತಾ “ನನ್ನ ಮತ ನನ್ನ ಹಕ್ಕು” ಮತದಾನದಿಂದ ಯಾರು ವಂಚಿತರಾಗಬಾರದು ಎಂಬ ಚುನಾವಣೆ ಸ್ಲೋಗನಗಳನ್ನು ಕೂಗುತ್ತಾ, ಪಟ್ಟಣದ ಮುಖ್ಯಬೀದಿಗಳಲ್ಲಿ, ಜಾತ ಕಾರ್ಯಕ್ರಮ ಹಮ್ಮಿಕೊಂಡು, ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕಾರ್ಯನಿರ್ವಾಹಕ ಅಧಿಕಾರಿಗಳು ರವರ ಅಧ್ಯಕ್ಷತೆಯಲ್ಲಿ ಹಾಗೂ ಎಲ್ಲಾ ಅಧಿಕಾರಿ ವರ್ಗದವರು ಚುನಾವಣೆ ಮತದಾರರ ಪ್ರತಿಜ್ಞಾವಿಧಿ ಬೋಧಿಸಿ, “ನಮ್ಮ ನಡೆ ಮತಗಟ್ಟೆ ಕಡೆ” ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂಬರ್ 01, ಅಥಣಿ ಮತಗಟ್ಟೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು, ಈ ಕಾರ್ಯಕ್ರಮದಲ್ಲಿ ತಾ.ಪಂ ಕಚೇರಿಯ ಎಡಿಪಿಆರ್ ಜಿ ಎಸ್ ಮಠದ, ಕೆ ಎಮ್ ಮಾಯಣ್ಣವರ, ಎಂ ಆರ್ ಕೊತ್ವಾಲ್, ತಾಲೂಕ ಆರೋಗ್ಯ ಅಧಿಕಾರಿಗಳು ಬಸವಗೊಂಡ ಕಾಗೆ, ಸಮಾಜ ಕಲ್ಯಾಣ ಅಧಿಕಾರಿ. ಬಿ ವಾಯ್ ಯಾದವಾಡ, ಬಿಇಓ ಎಮ್ ಬಿ ಮೋರಟಗಿ, ಮಲ್ಲಿಕಾರ್ಜುನ ನಾಮದಾರ, ಸಿಆರ್‌ಪಿ. ಎನ್.ಎಂ ಹಿರೇಮಠ. ಅಣ್ಣಪ್ಪ ಸವದಿ, ಇತರ ಶಿಕ್ಷಕರು, ಸಿಡಿಪಿಒ ಮಂಜುನಾಥ ಸೌಂದಲಗಕರ್, ಬಿಸಿಎಂ ಅಧಿಕಾರಿ ವೆಂಕಟೇಶ ಕುಲಕರಣಿ. ಪುರಸಭೆಯ ಅಧಿಕಾರಿ ಎ.ಎಲ್ ನದಾಫ್, ಅಂಗನವಾಡಿ ಕಾರ್ಯಕರ್ತೆಯರು, ಬಿ. ಎಲ್. ಓ. ಬಿಸಿಎಂ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿ ವರ್ಗದವರು ಎಸ್ ಎನ್ ಹಿರೇಮಠ. ಸಂಗಪ್ಪ ಮುಳ್ಳಟ್ಟಿ. ವಿಶ್ವನಾಥ ಮೋರೆ. ಸ್ವಪ್ನ ಜಂಬಿಗಿ. ಟಿ ಎನ್ ಕೋಳಿ. ಆನಂದ. ವಂಟಗುಡೆ, ಮಂಜು, ಬಸು, ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿನೂತನ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.





