ಶುದ್ಧ ನೀರಿಗಾಗಿ ಆಗ್ರಹಿಸಿ ದೊಡ್ಡಬಳ್ಳಾಪುರ ತಾಲೂಕಿನ ಎರಡು ಗ್ರಾಮ ಪಂಚಾಯ್ತಿಯ 18 ಗ್ರಾಮಗಳ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡಿದ್ದಾರೆ,
ಗ್ರಾಮಸ್ಥರ ಒಲೈಕೆಗೆ ಮುಂದಾದ ಅಧಿಕಾರಿಗಳು ಸಂಧಾನ ಸಭೆ ನಡೆಸಿದರು, ಮೂರನೇ ಸಂಸ್ಕರಣಾಘಟಕ ಸ್ಥಾಪನೆಯಾಗದ ಹೊರತು ಚುನಾವಣೆ ಬಹಿಷ್ಕಾರ ಹಿಂತೆಗೆದು ಕೊಳ್ಳುವುದಿಲ್ಲವೆಂದು ಹೋರಾಟಗಾರರು ಪಟ್ಟುಹಿಡಿದರು. ಚಿಕ್ಕ ಮತ್ತು ದೊಡ್ಡತುಮಕೂರು ಕೆರೆಗಳು ಈಗಾಗಲೇ ಹಾಳಾಗಿದ್ದು ಅಧಿಕಾರಿಗಳಿಂದ ಸ್ಪಂದನೆ ಸಿಗದೆ ಹಿನ್ನಲೆ ಚುನಾವಣೆ ಬಹಿಷ್ಕಾರ ಮಾಡಲಾಗಿದೆ.