ಕುಶಾಲನಗರ ಕೂಡೂರು ಚೆಟ್ಟಳ್ಳಿಯ ತಾಯಿ, ಮಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ತಾಯಿ ಎಂ. ಯು. ಬೇಬಿರಾಣಿ, ಪುತ್ರಿ ಟಿ. ಎಸ್. ರಿನಿಶಾ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದು ಗಮನ ಸೆಳೆದಿದ್ದರು.
ಗೋಣಿಕೊಪ್ಪಲಿನ ವಿದ್ಯಾನಿಕೇತನ ಕಾಲೇಜ್‌ನಲ್ಲಿ ಓದಿದ್ದ ರಿನಿಶಾ ವಿಜ್ಞಾನ ವಿಭಾಗದಲ್ಲಿ 600 ಕ್ಕೆ 570 ಅಂಕಗಳನ್ನು ಪಡೆದುಕೊಂಡಿದ್ದಾರೆ. ತಾಯಿ ನೆಲ್ಲಿಹುದಿಕೇರಿ ಜೂನಿಯರ್ ಕಾಲೇಜ್ ನಲ್ಲಿ ಪರೀಕ್ಷೆ ಬರೆದಿದ್ದು, ಕಲಾ ವಿಭಾಗದಲ್ಲಿ 600 ಕ್ಕೆ 388 ಮಾರ್ಕ್ಸ್ ಪಡೆದಿದ್ದಾರೆ.