ಮಹಿಳೆಯರಂತೆಯೇ ಗಂಡಸರೂ ಕೂಡ ತಮ್ಮ ಮುಖವನ್ನು ದಿನಾ ತೊಳೆಯುತ್ತಿರಬೇಕು. ನಿಮ್ಮ ಮುಖದ ಚರ್ಮಕ್ಕೆ ಹೊಂದುವಂತಹ ವಿಶೇಷವಾಗಿ ತಯಾರಿಸಿದ ಉತ್ಪನ್ನಗಳನ್ನು ಉಪಯೊಗಿಸಿ ದಿನಕ್ಕೆ ಎರಡು ಬಾರಿ ಮುಖ ತೊಳೆಯಿರಿ
ನೀವು ಮುಖದ ಆರೈಕೆಯನ್ನು ಮಾಡುವ ನಿಯಮಗಳಲ್ಲಿ ಇದೂ ಅತ್ಯಂತ ಮುಖ್ಯವಾದುದು. ಅಂದರೆ ನೀವು ಹೊರಗಡೆ ಬಿಸಿಲಿನಲ್ಲಿ ಹೋಗುವಾಗ ಸೂರ್ಯನ ಅಲ್ಟ್ರಾ ವೈಲೆಟ್ ಕಿರಣಗಳು ಮತ್ತು ಮಾಲಿನ್ಯಗಳಿಂದಾಗಿ ತ್ವಚೆಯು ಹಾನಿ ಗೊಳಗಾಗುತ್ತದೆ
ಇಂತಹ ಸಂದರ್ಭದಲ್ಲಿ ನೀವು ಒಳಗೆ ಅಥವಾ ಹೊರಗೆ ಉತ್ತಮ ಸನ್‌ಬ್ಲಾಕ್ ಧರಿಸುವುದು ಅತ್ಯಗತ್ಯ.ಇದರಿಂದ ನಿಮ್ಮ ಮುಖದ ಮೇಲೆ ಆಗುವ ಕಲೆಗಳು, ಪಿಗ್ಮೆಂಟೇಶನ್ ಸುಕ್ಕುಗಳು ಮತ್ತು ಇತರ ವಯ ಸ್ಸಾದ ಲಕ್ಷಣಗಳು ಮತ್ತು ಚರ್ಮದ ಕ್ಯಾನ್ಸರ್ ನಂತಹ ಗಂಭೀರ ಸಮಸ್ಯೆ ಗಳಿಂದ ರಕ್ಷಿಸಿ ಕೊಳ್ಳಬಹುದು
ಮುಖಕ್ಕೆ ಹಚ್ಚುವ ಸೀರಮ್ ಅನ್ನು ನೀವು ಮುಖವನ್ನು ಸ್ವಚ್ಚವಾಗಿ ತೊಳೆದ ನಂತರ ಮತ್ತು ಮಾಯಿಸ್ಚುರೈಸಿಂಗ್ ಮಾಡುವ ಮೊದಲು ಅನ್ವಯಿಸಿ. ಇದರಲ್ಲಿ ನಿಮ್ಮ ಚರ್ಮವನ್ನು ಪೋಷಿಸುವ , ರಕ್ಷಿಸುವ ಮತ್ತು ಹೈಡ್ರೇಟ್ ಮಾಡುವ ಪದಾರ್ಥಗಳಿಂದ ಸೀರಮ್ ಗಳು ತುಂಬಿರುತ್ತವೆ
ಮಾಯಿಶ್ಚರೈಸಿಂಗ್ ಎನ್ನುವುದು ತ್ವಚೆಯ ಆರೈಕೆಯಲ್ಲಿ ಮಹತ್ವವಾದ ಹಂತವಾಗಿದೆ. ಪ್ರತಿ ಚರ್ಮದ ಪ್ರಕಾರವು ತೇವಾಂಶವಾಗಿರುವುದು ಮತ್ತು ಪೋಷಣೆಯನ್ನು ನೀಡಲು ಮಾಯಿಶ್ಚರೈಸರ್ ಅಗತ್ಯವಿರುತ್ತದೆ. ಇದು ನಿಮ್ಮ ನೈಸರ್ಗಿಕ ತೇವಾಂಶ ಮಟ್ಟವನ್ನು ಸಂರಕ್ಷಿಸುತ್ತದೆ
ನಿಮ್ಮ ಮುಖದಲ್ಲಿ ಸುಕ್ಕುಗಳು, ಮತ್ತು ಚರ್ಮ ಕೆಂಪಾಗುವ ಸಮಸ್ಯೆಯನ್ನು ಹೊಂದಿದ್ದಲ್ಲಿ,ಚರ್ಮದ ಸೌಂದರ್ಯತೆ ಯನ್ನು ಹೆಚ್ಚಿಸಲು ರೆಟಿನಾಲ್ ಸೀರಮ್ ಅನ್ನು ಉಪಯೋಗಿಸಿ





