ಯಾದಗಿರಿ ಬ್ರೇಕಿಂಗ್: ಕರುನಾಡಿನ ಮಣ್ಣಿಗಾಗಿ ಎರಡೂ ರಾಜ್ಯಗಳ ಡುಶಂ ಡುಶಂ..! ಕರ್ನಾಟಕದ ಗಡಿ ಭಾಗಕ್ಕೆ ನುಗ್ಗಿ ಮರಳು ದೋಚುತ್ತಿರುವ ತೆಲಂಗಾಣ ದಂಧೆಕೋರರು..! ಹಗಲು ರಾತ್ರಿ ಎನ್ನದೆ ನಮ್ಮ ಸಂಪತ್ತನ್ನೇ ಕೊಳ್ಳೆ ಹೊಡೆಯುತ್ತಿರುವ ದಂಧೆಕೋರರು..! ಸ್ಯಾಂಡ್ ಮಾಫಿಯಾಕ್ಕಾಗಿ 2 ರಾಜ್ಯಗಳ ಪೋಲಿಸರ ನಡುವೆ ಕಾದಾಟ..! ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾ. ಚೆಲ್ಲೇರಿ ಗ್ರಾಮದಲ್ಲಿ ಘಟನೆ.. ಚೆಲ್ಲೇರಿ ಹೊರವಲಯದಲ್ಲಿರುವ ಹಳ್ಳದ ಮರಳಿಗಾಗಿ ವಾಕ್ ಸಮರ.. ಗಡಿಭಾಗದ ಮರಳು ನಮ್ಮದು ಎಂದು ಕ್ಯಾತೆ ತೆಗೆಯುತ್ತಿರುವ ತೆಲಂಗಾಣ ಪೋಲಿಸರು.. ಸರ್ವೇ ಬೇಕಾದರೂ ಮಾಡಿಸೋಣ ಇದು ನಮ್ಮ ಮಣ್ಣು ಎಂದು ಪಟ್ಟು ಬಿಡದ ಕರ್ನಾಟಕ ಖಾಕಿ.. ತೆಲಂಗಾಣ ರಾಜ್ಯದ 3 ಟ್ರ್ಯಾಕ್ಟರ್ ವಶಕ್ಕೆ ಪಡೆದ ಕರ್ನಾಟಕ ಪೋಲಿಸರು.. ಒಟ್ಟಾರೆಯಾಗಿ ಎರಡೂ ರಾಜ್ಯಗಳ ನಡುವೆ ಮಣ್ಣಿಗಾಗಿ ಉದ್ವಿಗ್ನ ವಾತಾವರಣ ನಿರ್ಮಾಣ





