ಕೃಷ್ಣಾವೇಣಿ ಭೀಮಾ ಸಂಗಮದ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವ ಹಿನ್ನಲೆ ಅದ್ದೂರಿಯಾಗಿ ತ್ರಿವಿಧ ದಾಸೋಹಿ ಡಾ.ಶಿವಕುಮಾರ್ ಮಹಾಸ್ವಾಮಿಗಳ ಪುರಾಣ ಪ್ರವಚನ ಕಾರ್ಯಕ್ರಮ ಆರಂಭವಾಯಿತು ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕೃಷ್ಣಾವೇಣಿ ಭೀಮಾ ಸಂಗಮದ ಸಂಗಮೇಶ್ವರ ಜಾತ್ರಾ ಮಹೋತ್ಸವ ಹಿನ್ನಲೆ ತುಮಕೂರಿನ ತ್ರಿವಿಧ ದಾಸೋಹಿ ಡಾ.ಶಿವಕುಮಾರ್ ಮಹಾಸ್ವಾಮಿಗಳ ಪುರಾಣ ಪ್ರವಚನ ಕಾರ್ಯಕ್ರಮ ಆರಂಭ ಮಾಡಲಾಯಿತು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ತುಮಕೂರಿನ ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ ತುಮಕೂರಿನ ಸಿದ್ದಗಂಗಾ ಶ್ರೀಗಳು ಅಶೀರ್ವಚನ ನೀಡಿ,ನಮಗೆ ಜನ್ಮ ನೀಡಿದ ತಂದೆ,ತಾಯಿಯಂದಿರು ದೇವರಾಗಿದ್ದು,ಪ್ರತಿಯೊಬ್ಬರೂ ಹೆತ್ತವರ ಸೇವೆ ಮಾಡಿ ಬದುಕು ಸಾರ್ಥಕಗೊಳಿಸಬೇಕಿದೆ ಕ್ಷೇತ್ರದ ಮಹಿಮೆಯಿಂದ ಭಕ್ತರ ಮನಸ್ಸು ಬದಲಾಗಿ ಪವಿತ್ರ ಭಾವನೆ ಉಂಟಾಗುತ್ತದ ಸಂಗಮದ ಕ್ಷೇತ್ರವು ಪವಿತ್ರ ಪುಣ್ಯಕ್ಷೇತ್ರವಾಗಿದೆ.ಡಾ.ಶಿವಕುಮಾರ್ ಮಹಾಸ್ವಾಮಿಗಳ ಪುರಾಣ ಪ್ರವಚನ ಕೇಳುವದು ನಮ್ಮ ಭಾಗ್ಯ ಸಿಕ್ಕಿದೆ ಎಂದು ನುಡಿದರು





