ಸುಗೂರು(ಕೆ): ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಇಂದು ವೈಕುಂಠ ಏಕಾದಶಿ ಉತ್ಸವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎರಡನೇಯ ತಿರುಪತಿ ಎಂದೆ ಪ್ರಸಿದ್ದಿ ಪಡೆದ ಕಾಳಗಿ ತಾಲೂಕಿನ ಸೂಗುರು(ಕೆ)ಗ್ರಾಮದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಇಂದು ವೈಕುಂಠ ಏಕಾದಶಿ ಪ್ರಯುಕ್ತ ಬೆಳಗ್ಗೆ ಮೂರ್ತಿಗೆ ವಿಶೇಷ ಅಭಿಷೇಕ,ತುಳಸಿ ಪೂಜೆ,ಮಹಾಮಂಗಳ ಪೂಜೆ ನೆರವೇರಿಸಿ ದೇವಸ್ಥಾನದಲ್ಲಿ ವೈಕುಂಟ ದ್ವಾರ ತೆರೆದು ಲಕ್ಷ್ಮಿ ಪದ್ಮಾವತಿ ಸಹಸ್ರ ಪೂಜೆ ನೆರವೇರಿಸಿ ಭಕ್ತರಿಗೆ ಉತ್ತರ ದ್ವಾರ ದರ್ಶನಕ್ಕೆ ಚಾಲನೆ ನೀಡದರು.ನಾಳೆ ದೇವಸ್ಥಾನದ ಪಕ್ಕದಲ್ಲಿರುವ ಸುವರ್ಣ ಗಿರಿ ಬೆಟ್ಟದ ಮೇಲೆ ಬಿತ್ತದೇ,ಉಳಿಮೆ ಮಾಡದೆ ಬೆಳೆದಿರುವ ವಿಸ್ಮಯ ಭತ್ತದ ಮಹಾಪ್ರಸಾದ ಮತ್ತು ಲಡ್ಡುಗಳನ್ನು ವಿತರಿಸಲಾಗುವುದು ಯಂದರು.ಈ ಸಂದರ್ಭದಲ್ಲಿ ಸೂಗುರಿನ ಗ್ರಾಮಸ್ಥರು ಸೇರಿದಂತೆ ಕರ್ನಾಟಕ,ಆಂಧ್ರಪ್ರದೇಶ,ತೆಲಂಗಾಣ,ಮಹಾರಾಷ್ಟ್ರ ಸೇರಿದಂತೆ ಸಾವಿರಾರು ಭಕ್ತರು ಇದ್ದರು. ಪ್ರಸಾದ್ ಹಳ್ಳಿ SSVTV ನ್ಯೂಸ್ ಕಾಳಗಿ





