ಪಾಕಿಸ್ತಾನ ಮುಖ್ಯಮಂತ್ರಿ ಮೇಲೆ ಭದ್ರತಾ ಸಿಬ್ಬಂದಿಯಿಂದ ಹಲ್ಲೆ ಪಾಕಿಸ್ತಾನದ ಖೈಬರ್ ಪುಂಖ್ಯಾ ಪ್ರದೇಶದ ಮುಖ್ಯಮಂತ್ರಿ ಸೊಹೈಲ್ ಅಫ್ರಿದಿ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಪಂಜಾಬ್ ವಿಧಾನಸಭೆಗೆ ಇಂದು ಭೇಟಿ ನೀಡಿದ್ದಾಗ, ಅಲ್ಲಿನ ಭದ್ರತಾ ಸಿಬ್ಬಂದಿ ಅವರ ಮೇಲೆ ಹಲ್ಲೆ ನಡೆಸಿ, ಅವರನ್ನು ಮತ್ತು ಅವರ ಬೆಂಬಲಿಗರನ್ನು ಬಲವಂತವಾಗಿ ಹೊರದಬ್ಬಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಘಟನೆಯ ನಂತರ, ಮುಖ್ಯಮಂತ್ರಿ ಅಫ್ರಿದಿ, ಇದು ಬಹುತೇಕ ಸಮರ ಕಾನೂನಿನಂತಿದೆ ಮತ್ತು ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳಿದ್ದಾರೆ





