Google search engine
ಮನೆUncategorizedಕನ್ನಡ ನಾಮಫಲಕವನ್ನು ಶೇ ೬೦ ರಷ್ಟು ಬಳಸದಿರುವ ಹಾಗೂ ಮುಖ್ಯಮಂತ್ರಿ ಸ್ಥಾನ ಡಿ.ಕೆ.ಶಿ ರವರಿಗೆ ...

ಕನ್ನಡ ನಾಮಫಲಕವನ್ನು ಶೇ ೬೦ ರಷ್ಟು ಬಳಸದಿರುವ ಹಾಗೂ ಮುಖ್ಯಮಂತ್ರಿ ಸ್ಥಾನ ಡಿ.ಕೆ.ಶಿ ರವರಿಗೆ ಆಗ್ರಹ

ಕನ್ನಡ ನಾಮಫಲಕವನ್ನು ಶೇ ೬೦ ರಷ್ಟು ಬಳಸದಿರುವ ಹಾಗೂ ಮುಖ್ಯಮಂತ್ರಿ ಸ್ಥಾನ ಡಿ.ಕೆ.ಶಿ ರವರಿಗೆ ಆಗ್ರಹ

ಕಲಬುರಗಿಯಲ್ಲಿ ಕನ್ನಡ ನಾಮಫಲಕವನ್ನು ಶೇ ೬೦ ರಷ್ಟು ಬಳಸದಿರುವ ಹಾಗೂ ಇಲ್ಲಿನ ರೈತರ ಸಮಸ್ಯೆಗಳನ್ನು ಬಗೆಹರಿಸದಿರುವದರಿಂದ ಮುಖ್ಯಮಂತ್ರಿ ಸ್ಥಾನ ಡಿ.ಕೆ. ಶಿವಕುಮಾರ ರವರಿಗೆ ನೀಡಲು ಕಲ್ಯಾಣ ಕರ್ನಾಟಕ ಸೇನೆ ಆಗ್ರಹಿಸಿದೆ ಕಲಬುರಗಿ ನಗರದಲ್ಲಿನ ಸಮಸ್ಯೆಗಳ ಕುರಿತು ಶಾಸಕರು, ಸಚಿವರಿಗೆ, ಅಧಿಕಾರಿಗಳಿಗೆ ಪತ್ರ ನೀಡಿದ್ಸರು. ಅದ್ಯಾವುದು ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿರುವುದಿಲ್ಲ. ಮಾನ್ಯ ಮುಖ್ಯಮಂತ್ರಿಗಳು ಸೆಪ್ಟೆಂಬರ್ 17 ರಂದು ಕಲಬುರಗಿಗೆ ಧ್ವಜಾರೋಹಣಕ್ಕೆಂದು ಬರುವದಕ್ಕೆ ಮುಂಚೆ ಕನ್ನಡ ನಾಮಫಲಕದ ಕುರಿತು ಸೆಪ್ಟೆಂಬರ್ ೧೭ರ ಒಳಗಾಗಿ ಅಂಗಡಿ ಮುಗ್ಗಟ್ಟುಗಳು, ಹೋಟೇಲ್ಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ಭಾಷೆ ೬೦% ನಾಮಫಲಕಗಳು ಆಗದಿದ್ದರೆ ಉಗ್ರ ಹೋರಾಟ ಮಾಡುತ್ತೇವೆಂದು ಹೇಳಿದ್ದರೂ ಕೂಡ ಮಾನ್ಯ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಈ ಭಾಗದ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ಮಾಡುತ್ತಿರುವುದು ವಿಷಾದನೀಯ ಸಂಗತಿ, ಆದಕಾರಣ ಶ್ರೀ ಸಿದ್ದರಾಮಯ್ಯ ರವರು ಮುಖ್ಯಮಂತ್ರಿಳಾಗಿ ಸುಮಾರು ೨ ವರ್ಷ ೬ ತಿಂಗಳ ಕಾಲ ಅಧಿಕಾರ ಅನುಭವಿಸಿದ್ದಾರೆ. ಕೂಡಲೇ ತಮ್ಮ ಸ್ಥಾನದಿಂದ ಕೆಳಗಿಳಿದು ಮಾನ್ಯ ಶ್ರೀ ಡಿ.ಕೆ. ಶಿವಕುಮಾರ ರವರಿಗೆ ಮುಖ್ಯಮಂತ್ರಿ ಹುದ್ದೆಯ ಅವಕಾಶ ಮಾಡಿಕೊಟ್ಟು ಇನ್ನೂ ಮುಂದಿನ ಎರಡೂವರೆ ವರ್ಷದ ಅವಧಿಗೆ ಕೆಲಸ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಕಲ್ಯಾಣ ಕರ್ನಾಟಕ ಸೇನೆ ಕಲಬುರಗಿ ವತಿಯಿಂದ ಆಗ್ರಹಿಸುತ್ತೇವೆ. ಒಂದು ವೇಳೆ ನಮ್ಮ ಭಾಗವನ್ನು ಅನ್ಯಾಯ ಮಾಡುತ್ತ ಹೋದರೇ ಉತ್ತರ ಕರ್ನಾಟಕ ಭಾಗವನ್ನು ಸ್ವತಂತ್ರ ರಾಜ್ಯವನ್ನಾಗಿ ಮಾಡಿ ಹೊಸ ಮುಖ್ಯಮಂತ್ರಿಯನ್ನು ನೇಮಕ ಮಾಡಬೇಕೆಂದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!