Google search engine
ಮನೆUncategorizedಬೀದಿ ನಾಯಿಗಳನ್ನು ಹೊರವಲಯದ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಕಟ್ಟು ನಿಟ್ಟಿನ ನಿರ್ದೇಶನ

ಬೀದಿ ನಾಯಿಗಳನ್ನು ಹೊರವಲಯದ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಕಟ್ಟು ನಿಟ್ಟಿನ ನಿರ್ದೇಶನ

ರಾಷ್ಟ್ರ ರಾಜಧಾನಿ ಪ್ರದೇಶದ ವಸತಿ ಸಮುಚ್ಛಯ ಪ್ರದೇಶಗಳಿಂದ ಎಲ್ಲಾ ಬೀದಿ ನಾಯಿಗಳನ್ನು ಹೊರವಲಯದ ಆಶ್ರಯ ತಾಣಗಳಿಗೆ ಶಾಶ್ವತವಾಗಿ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕಟ್ಟು ನಿಟ್ಟಿನ ನಿರ್ದೇಶನ ನೀಡಿದೆ. ಇದರ ಬೆನ್ನಲ್ಲೇ ಬೆಂಗಳೂರು ಮಹಾನಗರಕ್ಕೂ ಇದೇ ಆದೇಶ ಜಾರಿಯಾದರೆ ಬಿಬಿಎಂಪಿ ಎಷ್ಟರ ಮಟ್ಟಿಗೆ ಸಜ್ಜಾಗಿದೆ ಎಂದು ಕೇಳಿದ್ರೆ ಇಲ್ಲಿಯವರೆಗೂ ಆಶ್ರಯತಾಣಗಳಿಲ್ಲ ಆರೈಕೆ ಕೇಂದ್ರ ಅಷ್ಟೇ ಇದೆ ಎನ್ನುತ್ತಾರೆ ಅಧಿಕಾರಿಗಳು. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ನಾಯಿ ಕಡಿತ ಪ್ರಕರಣಗಳು ಹೆಚ್ಚುತ್ತಿವೆ. 2023 ರಲ್ಲಿ ಬೆಂಗಳೂರಿನಲ್ಲಿ 2.8 ಲಕ್ಷ ಬೀದಿ ನಾಯಿಗಳಿದ್ದವು. 2025 ರ ಜನವರಿಯಿಂದ ಜೂನ್ವರೆಗೆ ಕರ್ನಾಟಕದಲ್ಲಿ ಬರೋಬ್ಬರಿ 2.3 ಲಕ್ಷ ನಾಯಿ ಕಡಿತ ಪ್ರಕರಣಗಳು ದಾಖಲಾಗಿದೆ. ಅಲ್ಲದೆ 19 ರೇಬೀಸ್ ಸಾವುಗಳು ಸಂಭವಿಸಿವೆ. 2024 ರಲ್ಲಿ 3.6 ಲಕ್ಷ ನಾಯಿ ಕಡಿತ ಮತ್ತು 42 ರೇಬೀಸ್ ಸಾವುಗಳು ವರದಿಯಾಗಿವೆ. ಇದೀಗ ದೆಹಲಿಗೆ ಕೊಟ್ಟಿರುವ ಆದೇಶದ ಅಗತ್ಯತೆ ಬಗ್ಗೆ ಬೆಂಗಳೂರಲ್ಲಿಯೂ ಚರ್ಚೆಯಾಗುತ್ತಿದೆ. ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಪಶುಸಂಗೋಪನಾ ಇಲಾಖೆಯ ವಿಶೇಷ ಅಯುಕ್ತ ಸುರಲ್ಕರ್ ವಿಕಾಸ್ ಕಿಶೋರ್, ನಗರದ ಬೀದಿ ನಾಯಿಗಳ ನಿರ್ವಹಣೆಗೆ ಸಂಬಂಧಿಸಿದ ಯೋಜನೆಗಳನ್ನು ಆರಂಭಿಸುವ ಮೊದಲು ನ್ಯಾಯಾಲಯದ ಆದೇಶದ ಪ್ರತಿಗಾಗಿ ಕಾಯುತ್ತಿದ್ದೇವೆ. ಪ್ರಸ್ತುತ, ಮಹದೇವಪುರ ವಲಯವನ್ನು ಹೊರತುಪಡಿಸಿ ಉಳಿದೆಲ್ಲಾ ಎಂಟು ವಲಯಗಳಲ್ಲಿ ಬಿಬಿಎಂಪಿಯ ಪ್ರಾಣಿ ಜನನ ನಿಯಂತ್ರಣ (ABC) ಕೇಂದ್ರಗಳು ಇವೆ. ಮಹದೇವಪುರದಲ್ಲಿ ಖಾಸಗಿ ಸಂಸ್ಥೆಯೊಂದು ಈ ಕಾರ್ಯಕ್ರಮವನ್ನು ನಿರ್ವಹಿಸುತ್ತಿದೆ. ನಿಯಮಗಳ ಪ್ರಕಾರ ಆರೋಗ್ಯವಾಗಿರುವ ನಾಯಿಗಳನ್ನು ಶಾಶ್ವತವಾಗಿ ಆಶ್ರಯ ತಾಣಗಳಲ್ಲಿ ಇರಿಸುವಂತಿಲ್ಲ ಎಂದರು

ಸುಪ್ರೀಂ ಕೋರ್ಟ್ ದೆಹಲಿಗೆ ಕೊಟ್ಟ ತೀರ್ಪು ಎಲ್ಲಾ ಪಾಲಿಕೆಗಳಿಗೂ ಅನ್ವಯಿಸುತ್ತದೆಯೇ ಎಂದು ನಮಗೆ ಖಚಿತವಿಲ್ಲ. ಆದೇಶದ ಪ್ರತಿ ಸಿಕ್ಕ ನಂತರವಷ್ಟೇ ಅದರ ವಿವರ ತಿಳಿಯುತ್ತದೆ ಎಂದಿದ್ದಾರೆ. ಪ್ರತಿ ಎಬಿಸಿ ಕೇಂದ್ರದಲ್ಲಿ 200ಕ್ಕೂ ಹೆಚ್ಚು ನಾಯಿಗಳನ್ನು ಇರಿಸಬಹುದು. ಇದರ ಸಾಮರ್ಥ್ಯವನ್ನು 2,000ಕ್ಕೆ ಹೆಚ್ಚಿಸಬಹುದು. ಆದರೆ, 2023ರ ಪ್ರಾಣಿ ಜನನ ನಿಯಂತ್ರಣ ನಿಯಮಗಳ ಪ್ರಕಾರ, ಆರೋಗ್ಯವಾಗಿರುವ ಬೀದಿ ನಾಯಿಗಳನ್ನು ದೀರ್ಘಕಾಲದವರೆಗೆ ಆಶ್ರಯದಲ್ಲಿ ಇರಿಸುವಂತಿಲ್ಲನಗರದಲ್ಲಿ ಪಾಲಿಕೆಗೆ ಸೇರಿದ ಶ್ವಾನಗಳ ಆಶ್ರಯತಾಣಗಳಿಲ್ಲ. ನಾಯಿ ಕಡಿತ ಪ್ರಕರಣಗಳಲ್ಲಿ ಆ ಶ್ವಾನಗಳನ್ನು ದಾಸರಹಳ್ಳಿಯ ಐದು ಕಮ್ಯೂನಿಟಿ ಕೆನಲ್ಗಳಲ್ಲಿ ತಾತ್ಕಾಲಿಕವಾಗಿ ಇರಿಸಲಾಗುತ್ತದೆ. ಯಲಹಂಕದಲ್ಲಿ ಹೊಸ ಸೌಲಭ್ಯವು ಕುಡಾ ನಿರ್ಮಾಣ ಹಂತದಲ್ಲಿದೆ. ಇಲ್ಲಿ ಎಬಿಸಿ ಸೇವೆಗಳ ಜೊತೆಗೆ ನಾಯಿಗಳನ್ನು ಗಮನಿಸುವ ಘಟಕಗಳೂ ಇರಲಿವೆ. ಬಿಬಿಎಂಪಿಯಲ್ಲಿ ಇತ್ತೀಚೆಗೆ ಬೀದಿ ನಾಯಿಗಳಿಗೆ ಚಿಕನ್-ರೈಸ್ ನೀಡುವ ಯೋಜನೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು, ಇದೀಗ ದೆಹಲಿ ಆದೇಶ ನಗರದಲ್ಲಿ ಜಾರಿಯಾದರೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಕೋರ್ಟ್ ಆದೇಶ ಏನು?

ಹೌದು ಹೆಚ್ಚುತ್ತಿರುವ ಬೀದಿ ನಾಯಿಗಳ ದಾಳಿ ಘಟನೆಗಳ ಹಿನ್ನೆಲೆಯಲ್ಲಿ, ”ದಿಲ್ಲಿಯ ಎಲ್ಲಾ ಜನವಸತಿ ಪ್ರದೇಶಗಳಿಂದ ಬೀದಿನಾಯಿಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಹೊರವಲಯದಲ್ಲಿ ಶಾಶ್ವತವಾಗಿ ಆಶ್ರಯತಾಣ ಸ್ಥಾಪಿಸಿ ಅಲ್ಲಿಗೆ ಎಲ್ಲಾ ನಾಯಿಗಳನ್ನು ಸಾಗಿಸಬೇಕು. ಈ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವಂತಿಲ್ಲ. ಬೇರೆಯವರ ಮಧ್ಯ ಪ್ರವೇಶ, ಪ್ರಾಣಿ ದಯಾ ಸಂಘಗಳ ಹಿತವಚನ ಕೇಳುವ ಅಗತ್ಯವಿಲ್ಲ,” ಎಂದು ಖಡಕ್ ಸೂಚನೆ ನೀಡಿದೆಜುಲೈ 30 ಕ್ಕೆ ಬೆಂಗಳೂರಲ್ಲಿ ವೃದ್ಧನ ಬಲಿಪಡೆದಿದ್ದ ಬೀದಿ ನಾಯಿಗಳು

ಜುಲೈ 30 ರಂದು ಕೂಡಾ ಕೊಡಿಗೇಹಳ್ಳಿಯಲ್ಲಿ 68 ವರ್ಷದ ಸೀತಪ್ಪ ಎಂಬುವವರ ಮೇಲೆ ದಾಳಿ ಮಾಡಿದ ಬೀದಿನಾಯಿಗಳು ಕಚ್ಚಿ ಕಚ್ಚಿ, ಕಡೆಗೂ ಪ್ರಾಣವನ್ನೇ ಕಿತ್ತುಕೊಂಡು ಬಿಟ್ಟಿದ್ದವು. ಈ ರೀತಿ ಹಲ್ಲೆಗಳು ಮಕ್ಕಳ ಮೇಲೂ ಹೆಚ್ಚುತ್ತಿದ್ದು, ಇವುಗಳನ್ನು ಮಟ್ಟಹಾಕುವಂತೆ ಬಿಬಿಎಂಪಿಗೆ ಜನ ಒತ್ತಾಯಿಸುತ್ತಲೇ ಬಂದಿದ್ದಾರೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!