Google search engine
ಮನೆUncategorizedಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣ : ಮೋನಿಕಾ ಉಮಾಕಾಂತ

ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣ : ಮೋನಿಕಾ ಉಮಾಕಾಂತ

ಜಾಗತಿಕ ಮಟ್ಟದಲ್ಲಿ ಪ್ರತಿ 40 ಸೆಕೆಂಡಿಗೆ ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಕ್ಲಿನಿಕಲ್ ಮನಶ್ಶಾಸ್ತ್ರಜ್ಞ ಮೋನಿಕಾ ಉಮಾಕಾಂತ್ ಹೇಳಿದರು.

 

ವಿಶ್ವ ಆತ್ಮಹತ್ಯೆ ತಡೆ ದಿನದ ಅಂಗವಾಗಿ ಖಾಜಾ ಬಂದನವಾಜ ವಿಶ್ವವಿದ್ಯಾಲಯದ ಸೈಕೋಲೋಜಿ ವಿಭಾಗ ಮಂಗಳವಾರ ಏರ್ಪಡಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

 

ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲಿ 15 ರಿಂದ 39 ವಯಸ್ಸಿನವರಲ್ಲಿ ಹೆಚ್ಚಿಗೆ ಆತ್ಮಹತ್ಯೆ ಕಂಡು ಬರುತ್ತಿದೆ.  ಜೀವನದ ಒತ್ತಡ, ಸ್ಪರ್ಧಾ ಜಗತ್ತಿನ ಆತಂಕ, ಹಣಕಾಸು ಸಮಸ್ಯೆ, ಆರೋಗ್ಯ  ಸಮಸ್ಯೆ, ಸಾಮಾಜಿಕ ವ್ಯವಸ್ಥೆ ಮುಂತಾದ ಕಾರಣಗಳಿಂದ ಆತ್ಮಹತ್ಯೆ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದರು.

 

ನಂತರ ಮುಕ್ತ ಸಂವಾದ ಕಾರ್ಯಕ್ರಮ ನಡೆಯಿತು.

ಪ್ರಾರಂಭದಲ್ಲಿ ತಸ್ಕೀನ್ ಅಂಜುಮ ಪ್ರಾರ್ಥಿಸಿದರು.

ಶಾಯಿಸ್ತಾ ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥೆ ಅಲಿಶಾ ಟ್ರೀಸಾ ಥಾಮಸ್ ಸಂಪನ್ಮೂಲ ವ್ಯಕ್ತಿಪರಿಚಯ ಮಾಡಿದರು. ಫಿರ್ದೌಸ್ ವಂದಿಸಿದರೆˌ ರಾಬಿಯಾ ನಿರೂಪಿಸಿದರು.

 

ಕಲಾ, ಮಾನವಕತೆ ಮತ್ತು ಸಮಾಜ ವಿಜ್ಞಾನ ನಿಕಾಯದ ಎಲ್ಲ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!