ಜಮೀನಿನ ಬದುವಿಗೆ ವಿಚಾರಕ್ಕೆ ನಡೆದ ದಾಯಾದಿ ಕಲಹದಲ್ಲಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದ ಜಮೀನಿನಲ್ಲಿ ನಡೆದಿದೆ. ನಾಲತವಾಡ ಗ್ರಾಮದ ಬಾಲಪ್ಪ ಅಮರಪ್ಪ ಕ್ಷತ್ರಿ (47)ಕೊಲೆಗೀಡಾದವ. ಈತನ ಸಹೋದರನ ಪುತ್ರ ಆದಪ್ಪ ಪರಸಪ್ಪ ಕ್ಷತ್ರಿ ಹಾಗೂ ಇತರರು ಕೂಡಿ ಬಾಲಪ್ಪನನ್ನು ಕೊಲೆ ಮಾಡಿದ್ದಾರೆ. ಜಮೀನಿನ ವ್ಯಾಜ್ಯ ಕುರಿತಂತೆ ದಾಯಾದಿಗಳಲ್ಲಿ ಹಳೆಯ ವೈಷಮ್ಯವಿತ್ತು. ಪ್ರಕರಣ ದಾಖಲಾಗಿದೆ





