ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು ಡೆಡ್ ಲೈನ್ ಫಿಕ್ಸ್ ಆಗಿದೆ. ಮೇ 31ರ ಒಳಗಡೆ ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಕಮೀಷನರ್ ಡೆಡ್ ಲೈನ್ ನೀಡಿದ್ದಾರೆ. ಆರು ವಲಯಗಳಲ್ಲಿ ಮೇ 31 ರ ಒಳಗಡೆ ಮುಚ್ಚಲು ಸೂಚನೆ ನೀಡಲಾಗಿದೆ. ದಾಸರಹಳ್ಳಿ, ರಾಜೇಶ್ವರಿ ನಗರ ವಲಯದಲ್ಲಿ ಜೂನ್ 04 ನೇ ತಾರೀಖಿನವರೆಗೂ ಮುಚ್ಚಲು ಸೂಚನೆ ನೀಡಲಾಗಿದೆ ಎಂದು, ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಇದುವರೆಗೂ 5, 500 ಗುಂಡಿಗಳಿದ್ದು, ಅದರಲ್ಲಿ 1, 200 ಗುಂಡಿಗಳು ಮುಚ್ಚಿದ್ದಾರೆ ಅಂತ ತಿಳಿಸಿದರು





