ಆರ್ ಟಿ ನಗರ ಮುಖ್ಯ ರಸ್ತೆ ಕಾಮಗಾರಿ ತಡವಾಗಿ ಸಾಗುತ್ತಿರುವ ಹಿನ್ನೆಲೆ ಆರ್ ಟಿ ನಗರ ಮುಖ್ಯ ರಸ್ತೆಯಲ್ಲಿರುವ ಹೋಟೆಲ್, ಬೇಕರಿ, ಅಂಗಡಿಗಳಿಗೆ ಬಿಗ್ ಲಾಸ್ ಆಗ್ತಿದೆ. ಕಳೆದ 6 ತಿಂಗಳಿಂದ ರಸ್ತೆ ಕಾಮಗಾರಿಯಿಂದ ವ್ಯಾಪಾರಿಗಳಿಗೆ ನಷ್ಟ ಉಂಟಾಗ್ತಿದೆ.
ಆರ್ ಟಿ ನಗರ ರಸ್ತೆ ದುರಸ್ತಿ ಕೆಲಸ ಬಹಳ ನಿಧಾನವಾಗಿ ನಡೆಯುತ್ತಿದ್ದು, ಅಂದಾಜು 500ಕ್ಕಿಂತ ಹೆಚ್ಚಿನ ಅಂಗಡಿಗಳಿಗೆ ಪ್ರಾಬ್ಲಂ ಆಗಿದೆ ಎಂದು ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ. ಸಿ ರಾವ್ ಮನವಿ ಪತ್ರ ಬರೆದಿದ್ದಾರೆ.





