Home Uncategorized ಸಿಡಿಲು ಬಡಿದು ಎತ್ತು ಸಾವು ಪರಿಹಾರಕ್ಕೆ ರೈತನ ಆಗ್ರಹ

ಸಿಡಿಲು ಬಡಿದು ಎತ್ತು ಸಾವು ಪರಿಹಾರಕ್ಕೆ ರೈತನ ಆಗ್ರಹ

0
ಸಿಡಿಲು ಬಡಿದು ಎತ್ತು ಸಾವು ಪರಿಹಾರಕ್ಕೆ ರೈತನ ಆಗ್ರಹ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣವೂ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಇತ್ತಿಚೆಗೆ ಬೀಸಿದ ಬಿರುಗಾಳಿ ಹಾಗೂ ಮಳೆಗೆ ಹಲವು ಮರಗಳು ಧರೆಗೆ ಉರುಳಿವೆ. ಸಿಡಿಲು ಬಡಿದು ಎತ್ತು ಮೃತಪಟ್ಟಿವೆ. ಅದರಲ್ಲಿ ತಾಲ್ಲೂಕಿನ ಅಡವಿ ಹುಲಗಬಾಳದಲ್ಲಿ ರೈತ ಹಣಮಂತ ಕಂಬಾರ ಎಂಬುವರು ಹೊಲದಲ್ಲಿಯ ಶೆಡ್‌ನಲ್ಲಿ ಕಟ್ಟಿದ್ದ ಎತ್ತು ಸಿಡಿಲು ಬಡಿದು ಮೃತಪಟ್ಟಿದೆ. ಇದು ₹ 50 ಸಾವಿರ ಮೌಲ್ಯದ ಎತ್ತಾಗಿದ್ದು, ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ನೊಂದ ರೈತ ತಾಲ್ಲೂಕಾಡಳಿತಕ್ಕೆ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here

error: Content is protected !!