Home Uncategorized ಭಯೋತ್ಪಾದನಾ ವಿರೋಧಿ ದಿನ ಜಿಲ್ಲಾಧಿಕಾರಿ ಡಾ ಸುಶೀಲ ಬಿ ಅವರು ಪ್ರಮಾಣ ವಚನ ಬೋಧನೆ

ಭಯೋತ್ಪಾದನಾ ವಿರೋಧಿ ದಿನ ಜಿಲ್ಲಾಧಿಕಾರಿ ಡಾ ಸುಶೀಲ ಬಿ ಅವರು ಪ್ರಮಾಣ ವಚನ ಬೋಧನೆ

0
ಭಯೋತ್ಪಾದನಾ ವಿರೋಧಿ ದಿನ ಜಿಲ್ಲಾಧಿಕಾರಿ ಡಾ ಸುಶೀಲ ಬಿ  ಅವರು ಪ್ರಮಾಣ ವಚನ ಬೋಧನೆ

ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಸುಶೀಲ ಬಿ. ಅವರು ‘ಭಯೋತ್ಪಾದನಾ ವಿರೋಧಿ ದಿನ’ದ ಪ್ರಮಾಣ ವಚನ ಬೋಧಿಸಿದರು.

ಅಹಿಂಸೆ ಹಾಗೂ ಸಹನೆಗೆ ಹೆಸರಾದ ನಮ್ಮ ರಾಷ್ಟ್ರದ ಭವ್ಯ ಪರಂಪರೆಯಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪ್ರಜೆಗಳಾದ ನಾವು ಎಲ್ಲಾ ಬಗೆಯ ಭಯೋತ್ಪಾದನೆ ಮತ್ತು ಹಿಂಸೆಯನ್ನು ನಮ್ಮೆಲ್ಲ ಶಕ್ತಿ ಸಾಮರ್ಥ್ಯ‌ದಿಂದ ಎದುರಿಸುತ್ತೇವೆ ಎಂದು ಪ್ರತಿಜ್ಞೆ ಮಾಡುತ್ತೇವೆ ಎಂದರು.

”ನಮ್ಮ ಸಹಬಾಂಧವರಲ್ಲಿ ಶಾಂತಿ, ಸಾಮಾಜಿಕ ಸೌಹಾರ್ದತೆ ಮತ್ತು ಪರಸ್ಪರ ಅರಿವನ್ನು ಸಾಧಿಸಲು ಮತ್ತು ಉತ್ತೇಜಿಸಲು ಹಾಗೂ ಮಾನವ ಜೀವಕ್ಕೆ ಮತ್ತು ಮೌಲ್ಯಗಳಿಗೆ ಬೆದರಿಕೆ ಒಡ್ಡುತ್ತಿರುವ ವಿಚಿತ್ರಕಾರಿ ಶಕ್ತಿಗಳ ವಿರುದ್ಧ ಹೋರಾಡಲು ನಾವು ಪಣ ತೊಡುತ್ತೇವೆ ” ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪ್ರಮಾಣ ವಚನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಚುನಾವಣೆ ತಹಶೀಲ್ದಾರ್ ಸಂತೋಷರಾಣಿ ಸೇರಿದಂತೆ ಕಚೇರಿಯ ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

error: Content is protected !!