Google search engine
ಮನೆCOOKING WITH KITCHEN TIPSಪನೀರ್ ಬಿರಿಯಾನಿ ಮಾಡುವ ವಿಧಾನ

ಪನೀರ್ ಬಿರಿಯಾನಿ ಮಾಡುವ ವಿಧಾನ

 

ಬೇಕಾಗುವ ಸಾಮಗ್ರಿಗಳು

 

ಬಾಸುಮತಿ ಅಕ್ಕಿ

ಪನೀರ್

ಈರುಳ್ಳಿ

ಟೊಮೆಟೊ

ಶುಂಠಿ ಬೆಳ್ಳುಳ್ಳಿ ಪೇಸ್ಟ್

ಮೊಸರು

ಹಸಿರು ಮೆಣಸಿನಕಾಯಿ

ಮಸಾಲೆ ಪುಡಿಗಳು

ಪುದೀನಾ ಮತ್ತು ಕೊತ್ತಂಬರಿ ಸೊಪ್ಪು

ತುಪ್ಪ ಅಥವಾ ಎಣ್ಣೆ

ಒಣ ಮಸಾಲೆ

 

ಪನೀರ್ ಬಿರಿಯಾನಿ ಮಾಡುವ ವಿಧಾನ

ಮೊಸರು, ಖಾರದ ಪುಡಿ, ಅರಿಶಿನ, ಬಿರಿಯಾನಿ ಮಸಾಲಾ ಮತ್ತು ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಇದಕ್ಕೆ ಪನೀರ್ ತುಂಡುಗಳನ್ನು ಹಾಕಿ 20 ನಿಮಿಷ ನೆನೆಯಲು ಬಿಡಿ

ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ, ಒಣ ಮಸಾಲೆ ಪದಾರ್ಥಗಳನ್ನು (ಲವಂಗ, ಚಕ್ಕೆ ಇತ್ಯಾದಿ) ಹಾಕಿ. ನಂತರ ಈರುಳ್ಳಿ ಸೇರಿಸಿ ಹೊಂಬಣ್ಣ ಬರುವವರೆಗೆ ಹುರಿಯಿರಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಟೊಮೆಟೊ ಸೇರಿಸಿ ಮೆತ್ತಗಾಗುವವರೆಗೆ ಬೇಯಿಸಿ ಮ್ಯಾರಿನೇಟ್ ಮಾಡಿದ ಪನೀರ್ ಮಿಶ್ರಣವನ್ನು ಹಾಕಿ ಸ್ವಲ್ಪ ಹೊತ್ತು ಬಾಡಿಸಿ. ನಂತರ ನೆನೆಸಿಟ್ಟ ಅಕ್ಕಿ ಸೇರಿಸಿ ಮೆಲ್ಲಗೆ ಕೈಯಾಡಿಸಿ ಅಕ್ಕಿಯ ಅಳತೆಗೆ ತಕ್ಕಂತೆ ನೀರು (ಸಾಮಾನ್ಯವಾಗಿ 1 ಕಪ್ ಅಕ್ಕಿಗೆ 1.5 ರಿಂದ 2 ಕಪ್ ನೀರು) ಸೇರಿಸಿ. ಕೊನೆಯದಾಗಿ ಪುದೀನಾ ಮತ್ತು ಕೊತ್ತಂಬರಿ ಸೊಪ್ಪು ಉದುರಿಸಿ ಕುಕ್ಕರ್ ಮುಚ್ಚಳ ಮುಚ್ಚಿ 2 ವಿಸಲ್ ಕೂಗಿಸಿ. ಪ್ರೆಶರ್ ಇಳಿದ ನಂತರ ಬಿಸಿಬಿಸಿಯಾದ ಬಿರಿಯಾನಿ ಸಿದ್ಧ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!