ಸಿದ್ರಾಮಣ್ಣ ನಡೆದು ಬಂದ ದಾರಿ ಮರೆತ್ತಿದ್ದಾರೆ, ದೇವರು ಒಳ್ಳೆಯದು ಮಾಡಲಿ: ನಿಖಿಲ್ ಕುಮಾರಸ್ವಾಮಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದು 25 ನೇ ವರ್ಷಾಚರಣೆ ಮಾಡುತ್ತಿರುವುದು ರಾಜ್ಯದ ರಾಜಕೀಯ ಇತಿಹಾಸದಲ್ಲಿಯೆ ಇದೆ ಮೊದಲು. ಪಕ್ಷದ ಬೆಳವಣಿಗೆಗಾಗಿ ತನು, ಮನ, ಧನ ಎಲ್ಲವನ್ನೂ ಅರ್ಪಿಸಿ, ಹೋರಾಟ ಮಾಡಿ, ಕೇಸ್ ಗಳನ್ನು ಹಾಕಿಸಿಕೊಂಡು ಪ್ರತಿ ಬೂತ್ ನಲ್ಲಿ ಜೆಡಿಎಸ್ ಧ್ವಜವನ್ನು ಹಾರಿಸಿದ ನಮ್ಮ ಚಿನ್ನದಂತಹ ಕಾರ್ಯಕರ್ತರಿಂದ ಇದು ಸಾಧ್ಯವಾಗಿದೆ. 25 ವರ್ಷಗಳ ಕಾಲ ನೆಲ, ಜಲ, ಭಾಷೆಗಾಗಿ ಹೋರಾಟ ಮಾಡುತ್ತಾ ಬಂದಿರುವ ಮಾಜಿ ಪ್ರಧಾನಮಂತ್ರಿಗಳಾದ . ದೇವೇಗೌಡರು ಹಾಗೂ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ರೈತರ ಪರವಾಗಿ ಆಡಳಿತ ಮಾಡಿದ ಕುಮಾರಣ್ಣನವರ ಕೊಡುಗೆಯನ್ನು ನಾವೆಲ್ಲರೂ ಸ್ಮರಿಸಬೇಕು ಎಂದು ನಿಖಿಲ್ ಅವರು ಹೇಳಿದರು ರಾಜ್ಯದ ಮುಖ್ಯಮಂತ್ರಿ ಸಿದ್ರಾಮಣ್ಣ ಅವರು ನಡೆದು ಬಂದ ದಾರಿ ಮರೆತಿದ್ದಾರೆ. ಇದು ಅವರಿಗೆ ಮಾಡಿಕೊಳ್ಳುತ್ತಿರುವ ಅನ್ಯಾಯ. ನೀವು ಹಿರಿಯರು, ಅನುಭವಿಗಳು ಗೌರವಿಸುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಸೂಕ್ಷ್ಮವಾಗಿ ಕುಟುಕಿದರು ಜೆಡಿಎಸ್ 25 ವರ್ಷಗಳ ರಜತ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ಪಕ್ಷದ ರಾಜ್ಯ ಕಛೇರಿ ಜೆ.ಪಿ. ಭವನದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಮಹಾ ಅಧಿವೇಶನ ಕಾರ್ಯಕ್ರಮವನ್ನು ಉದ್ಘಾಟಿಸಿ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿದರು
ಸಿದ್ರಾಮಣ್ಣ ನಡೆದು ಬಂದ ದಾರಿ ಮರೆತ್ತಿದ್ದಾರೆ, ದೇವರು ಒಳ್ಳೆಯದು ಮಾಡಲಿ: ನಿಖಿಲ್ ಕುಮಾರಸ್ವಾಮಿ
ಸಿದ್ರಾಮಣ್ಣ ನಡೆದು ಬಂದ ದಾರಿ ಮರೆತ್ತಿದ್ದಾರೆ, ದೇವರು ಒಳ್ಳೆಯದು ಮಾಡಲಿ: ನಿಖಿಲ್ ಕುಮಾರಸ್ವಾಮಿ
RELATED ARTICLES
Recent Comments
ಮೇಲೆ Hello world!





