ದೇಶದ ಪ್ರಧಾನಿ ನವ ದೆಹಲಿಯಲ್ಲಿ ನಡೆದಿರುವ ಐತಿಹಾಸಿಕ 13 ತಿಂಗಳ ಹೋರಾಟಕ್ಕೆ ಮಣಿದು ಮೂರು ಕರಾಳ ಕಾನೂನು ಲೋಕಸಭೆಯಲ್ಲಿ ಹಿಂದೆ ಪಡೆದು ಕೃಷಿ ಬೆಳೆಗೆ ಎಮ್.ಎಸ್.ಪಿ. ಬೆಲೆ ನಿಗಧಿ ಮಾಡುವುದಕ್ಕೆ ಒಂದು ವರ್ಷದ ಅವಧಿಯಲ್ಲಿ ಇಲ್ಲಿಯವರೆಗೆ 5 ವರ್ಷ ಗತಿಸಿದ್ದರೂ ಕೂಡಾ ಎಮ್.ಎಸ್.ಪಿ ನಿಗಧಿ ಮಾಡದ ಕಾರಣ ಎಲ್ಲಾ ಕೃಷಿ ಉತ್ಪಾದನೆಯ ಬೆಲೆ ಸಂಪೂರ್ಣವಗಿ ಬೆಳೆಗಳ ಬೆಲೆ ಕುಸಿತವಾಗಿದೆ ಅಂತ ಅಖಿಲ ಭಾರತ ಕಿಸಾನ್ ಸಭಾ ಆರೋಪಿಸಿದೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಮೇರಿಕಾ ಜೊತೆ ಶುಲ್ಕ ರಹಿತ ವ್ಯಾಪಾರ ಒಪ್ಪಂದಕ್ಕೆ ಮಾನ್ಯ ಪ್ರಧಾನಿಗಳು ಒಪ್ಪಿಗೆ ಕೊಟ್ಟಿದ್ದಕ್ಕೆ ಹಾಲು. ಮೇಕೆಜೋಳ, ಹತ್ತಿ, ಮೀನು, ಇತ್ಯಾದಿ ಉತ್ಪಾದನೆಗಳನ್ನು ಕಡಿಮೆ ಬೆಲೆಗೆ ಆಮದು ಮಾಡಿಕೊಳ್ಳುತ್ತಿರುವುದ್ದರಿಂದ ನಮ್ಮ ರೈತರು ಬೆಳೆದ ಬೆಳೆಗಳಿಗೆ ಹೊಡೆತ ಬೀಳುತ್ತಿದೆ. ಹೀಗಾಗಿ ಡಾ| ಸ್ವಾಮಿನಾಥನ ವರಧಿಯ ಆಧಾರದ ಮೇಲೆ ಬೆಲೆ ನಿಗದಿ ಮಾಡಬೇಕು. ಈ ವರ್ಷ ರೈತರು ಬೆಳೆದ ಈರುಳ್ಳಿ, ಹತ್ತಿ, ಕಬ್ಬು, ಸೋಯಾಬಿನ್ನ, ಮತ್ತು ತೋಗರಿ ಮುಂತಾದ ಬೆಳೆಗಳಿಗೆ ಬೆಂಬಲ ಬೆಲೆ ನಿಗಧಿ ಮಾಡಬೇಕು. ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ರೈತರ ಬ್ಯಾಂಕ ಸಾಲ ಮನ್ನಾ ಮಾಡಬೇಕು. ಬೆಳೆ ಹಾನಿ ಪರಿಹಾರ ಶೀಘ್ರದಲ್ಲಿ ಕೊಡಬೇಕೆಂದು ಒತ್ತಾಯಿಸಿ ದಿನಾಂಕ:26-11-2025 ರಂದು ಕಲಬುರಗಿ ಜಿಲ್ಲಾಧಿಕಾರಿಯ ಕಛೇರಿಯ ಎದರುಗಡೆ ಅಖಿಲ ಭಾರತ ಕಿಸಾನ್ ಸಭಾ ವತಿಯಿಂದ ಬೃಹತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ
ಎಮ್.ಎಸ್.ಪಿ ನಿಗಧಿ ಮಾಡದ ಕಾರಣ ಎಲ್ಲಾ ಕೃಷಿ ಉತ್ಪಾದನೆಯ ಬೆಲೆ ಸಂಪೂರ್ಣವಗಿ ಬೆಳೆಗಳ ಬೆಲೆ ಕುಸಿತವಾಗಿದೆ
ಎಮ್.ಎಸ್.ಪಿ ನಿಗಧಿ ಮಾಡದ ಕಾರಣ ಎಲ್ಲಾ ಕೃಷಿ ಉತ್ಪಾದನೆಯ ಬೆಲೆ ಸಂಪೂರ್ಣವಗಿ ಬೆಳೆಗಳ ಬೆಲೆ ಕುಸಿತವಾಗಿದೆ





