Google search engine
ಮನೆUncategorizedಎಸ್ ಕೆ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ಪ್ರಥಮ ಬಾರಿಗೆ ಮಾರ್ಕೆಟ್...

ಎಸ್ ಕೆ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ಪ್ರಥಮ ಬಾರಿಗೆ ಮಾರ್ಕೆಟ್ ಮೇಳ

ಎಸ್ ಕೆ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ಪ್ರಥಮ ಬಾರಿಗೆ ಮಾರ್ಕೆಟ್ ಮೇಳ

ತಾಳಿಕೋಟೆ ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಸ್ ಕೆ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ಪ್ರಥಮ ಬಾರಿಗೆ ಮಾರ್ಕೆಟ್ ಮೇಳ ಎಂಬ ವಿನೂತನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ದಿನಾಂಕ 25/ 11/ 2025 ರಂದು ಮಹಾವಿದ್ಯಾಲಯದ ಆವರಣದಲ್ಲಿ ಈ ಮಾರ್ಕೆಟ್ ಮೇಳ ನಡೆಯಲಿದೆ ಇಲ್ಲಿ ರುಚಿಕರವಾದ ಆಹಾರ ಮಳಿಗೆಗಳು, ಆಕರ್ಷಕ ವಾದ ಬಟ್ಟೆಗಳು, ಮನರಂಜನೆಯ ಆಟಗಳು, ಮತ್ತು ವಿವಿಧ ಬಗೆಯ ಸ್ಪರ್ಧಾತ್ಮಕ ಪುಸ್ತಕ ಮಳಿಗೆಗಳು ಇನ್ನೂ 10 ಹಲವು ಈ ಮಾರ್ಕೆಟ್ ಮೇಳದಲ್ಲಿ ಲಭ್ಯವಿರುತ್ತದೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಬೇಕೆಂದು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಡಿ ಬಿ ಮುಗಡ್ಲಿಮಠ ಅವರು ಸುದ್ದಿಗಾರರೊಂದಿಗೆ ಮಾತನಾಡಿ ತಿಳಿಸಿದ್ದಾರೆ… ಅದೇ ರೀತಿ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀಮತಿ ನೇಹಾ ನಾವದಗಿ ಅವರು ಮಾತನಾಡಿ ವಾಣಿಜ್ಯ ವಿಭಾಗದ ಮಕ್ಕಳಿಗೆ ಕಲಿಕೆಯ ಜೊತೆ ವ್ಯಾಪಾರ ಮತ್ತು ವಸ್ತುಗಳ ಮೇಲಿನ ಬೆಲೆ ಹೇಗೆ ನಿಗದಿ ಮಾಡಬೇಕು ಎಂದು ತಿಳಿಸಲು ಅವರಿಗೆ ಈ ಮಾರ್ಕೆಟ್ ಮೇಳ ಆರಂಭಿಸಲಾಗಿದೆ ಎಂದು ಹೇಳಿದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಮಾರ್ಕೆಟ್ ಮೇಳದ ಕುರಿತು ಅವರ ಮಾತುಗಳು. ಈ ಮಾರ್ಕೆಟ್ ಮೇಳದಲ್ಲಿ ಏನೆಲ್ಲಾ ಸಿಗುತ್ತೆ ಅಂತ ನಮ್ಮ ಜೊತೆ ಹಂಚಿಕೊಂಡಿದ್ದಾರೆ. ವಿವಿಧ ಬಗೆಯ ಆಹಾರ ಮಳಿಗೆಗಳು, ಆಕರ್ಷಕವಾದ ಬಟ್ಟೆಗಳು, ಸ್ಪರ್ಧಾತ್ಮಕ ಪುಸ್ತಕಗಳು ಆಟೋಮೊಬೈಲ್, ಕಾರ್ ಬೈಕುಗಳಿಗೆ ಲಭ್ಯ ಇರುವ ಬಿಡಿ ಭಾಗಗಳು ಇನ್ನು ಹತ್ತು ಹಲವು ಒಂದೇ ಮಾರ್ಕೆಟ್ ಮೇಳದಲ್ಲಿ ಲಭ್ಯವಿದ್ದು ಇದರ ಸದುಪಯೋಗವನ್ನು ಎಲ್ಲಾ ಸಾರ್ವಜನಿಕರು ಪಡೆದುಕೊಳ್ಳಿ ಈ ಮಾರ್ಕೆಟ್ ಮೇಳದಲ್ಲಿ ಬಾಗಿಯಾಗಿ ಹಾಗೂ ಯಶಸ್ವಿಗೊಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸುರೇಶ್ ದೊಡಮನಿ ಎಸ್ ಎಸ್ ವಿ ಟಿವಿ ನ್ಯೂಸ್ ತಾಳಿಕೋಟೆ ಬಿಜೆಪಿ ಮತ್ತು ಹಿಂದೂ ಸಂಘಟನೆಯ ಮುಖಂಡರು ಜೇವರ್ಗಿ ತಾಲ್ಲೂಕಿನ ನಾರಾಯಣಪೂರ ಗ್ರಾಮದ ರಶೀದ್ ಮುತ್ಯಾ ರವರ ಮೇಲೆ ಕೊಲೆ ಯತ್ನ ಮಾಡಿ ಹಲ್ಲೆ ಮಾಡಿದ್ದನ್ನು ಭೀಮ್ ಆರ್ಮಿ ಖಂಡಿಸಿದೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!