Home Uncategorized ಯಾದಗಿರಿಯ ಗ್ರಾಮೀಣ ಭಾಗದ ಕ್ರೀಡಾಪಟು ಈಗ ಅಂತರಾಷ್ಟ್ರೀಯ ಚಿನ್ನದ ಪದಕ ಗಿಟ್ಟಿಸಿಕೊಂಡಿದ್ದಾನೆ

ಯಾದಗಿರಿಯ ಗ್ರಾಮೀಣ ಭಾಗದ ಕ್ರೀಡಾಪಟು ಈಗ ಅಂತರಾಷ್ಟ್ರೀಯ ಚಿನ್ನದ ಪದಕ ಗಿಟ್ಟಿಸಿಕೊಂಡಿದ್ದಾನೆ

0
ಯಾದಗಿರಿಯ ಗ್ರಾಮೀಣ ಭಾಗದ ಕ್ರೀಡಾಪಟು ಈಗ ಅಂತರಾಷ್ಟ್ರೀಯ ಚಿನ್ನದ ಪದಕ ಗಿಟ್ಟಿಸಿಕೊಂಡಿದ್ದಾನೆ

ಯಾದಗಿರಿ ಜಿಲ್ಲೆಯ ಗ್ರಾಮೀಣ ಭಾಗದ ಕ್ರೀಡಾಪಟು ಈಗ ಅಂತರಾಷ್ಟ್ರೀಯ ಚಿನ್ನದ ಪದಕ ಗಿಟ್ಟಿಸಿಕೊಂಡಿದ್ದಾನೆ ಯಾದಗಿರಿ ತಾಲೂಕಿನ ಅಲ್ಲಿಪುರ ದೊಡ್ಡ ತಾಂಡಾದ ಕುಮಾರ್ ರಾಠೋಡ ಥೈಲ್ಯಾಂಡ್ ನಲ್ಲಿ ಹಮ್ಮಿಕೊಂಡ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ ಥೈಲ್ಯಾಂಡ್ ನಲ್ಲಿ ಅಂತರಾಷ್ಟ್ರೀಯ ಪ್ಯಾರಾ ಒಲಿಂಪಿಕ್ ಆಫ್ ಇಂಡಿಯಾ ಸಂಸ್ಥೆಯಿಂದ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಡಿಸ್ಕಸ್ ( ಚಕ್ರ) ಎಸೆತದಲ್ಲಿ ಗೊಲ್ಡ್ ಮೇಡಲ್ ಗೆದ್ದುಗೊಂಡಿದ್ದು,ಯಾದಗಿರಿ ಜಿಲ್ಲೆಯ ಕ್ರೀಡಾಭಿಮಾನಿಗಳಿಗೆ ಮೆಚ್ಚುವಂತಾಗಿದೆ.ಕುಮಾರ್ ರಾಠೋಡ ಕಡುಬಡತನಲ್ಲಿ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗಿಯಾಗಲು ಹಣಕಾಸಿನ ಸಮಸ್ಯೆ ಎದುರಿಸಿದನು ಈ ವೇಳೆ ತಾಂಡಾ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಮನೋಹರಚ ಕೆ ಪವಾರ್ ಅವರ ಪರಿಶ್ರಮವಹಿಸಿ,ಕುಮಾರ್ ರಾಠೋಡ ಅವರಿಗೆ ಹಲವು ಜನಪ್ರತಿನಿಧಿಗಳಿಂದ ಅರ್ಥಿಕ ಸಹಾಯ ಅದೆ ರೀತಿ ಜಿಲ್ಲಾ ಪಂಚಾಯತ ಸಿಇಓ ಲವೀಶ್ ಒರಡಿಯಾ ಅವರ ಸಹಾಯದಿಂದ ಥೈಲ್ಯಾಂಡ್ ನಲ್ಲಿ ಭಾಗವಹಿಸಲು ಸಾಧ್ಯವಾಯಿತು.ಥೈಲ್ಯಾಂಡ್ ನಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದು ಮತ್ತಷ್ಟು ಜಿಲ್ಲೆಗೆ ಕೀರ್ತಿ ಹೆಚ್ಚಿಸಿದೆ

LEAVE A REPLY

Please enter your comment!
Please enter your name here

error: Content is protected !!