ಯಾದಗಿರಿ ಜಿಲ್ಲಾಉಸ್ತುವಾರಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಅವರು 11 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ 110 ಕೆವಿ ವಿದ್ಯುತ್ ಉಪಕೇಂದ್ರವನ್ನು ಉದ್ಘಾಟನೆ ಮಾಡಿದರು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದಿಗ್ಗಿ ಗ್ರಾಮದಲ್ಲಿ ಉಪಕೇಂದ್ರ ಆರಂಭ ಮಾಡಿದರು. ಈ ವೇಳೆ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಅವರು ಮಾತನಾಡಿ, ವಿದ್ಯುತ್ ಉಪಕೇಂದ್ರ ಆರಂಭ ಮಾಡಿರುವದಿಂದ ವಿದ್ಯುತ್ ಸಮಸ್ಯೆ ನಿಗಲಿದೆ.ಮನುಷ್ಯನ ಬದುಕಿಗೆ ವಿದ್ಯುತ್ ಅವಶ್ಯವಿದೆ.ಹೀಗಾಗಿ ಯಾವುದೇ ಕೊರತೆಯಾಗದಂತೆ ಸರಕಾರದಿಂದ ಅಗತ್ಯ ಕ್ರಮವಹಿಸಲಾಗುತ್ತದೆ ಎಂದರು