Home Uncategorized ನಿಜಶರಣ ಅಂಬಿಗರ ಚೌಡಯ್ಯರ ಮೂರ್ತಿಗೆ ಕಿಡಿಗೇಡಿಗಳು ಕೆಸರು ಎರಚಿ ಎಡಗೈ ಭಗ್ನ; ನಿಜವಾದ ಆರೋಪಿಗಳನ್ನುಪತ್ತೆಗೆಆಗ್ರಹ

ನಿಜಶರಣ ಅಂಬಿಗರ ಚೌಡಯ್ಯರ ಮೂರ್ತಿಗೆ ಕಿಡಿಗೇಡಿಗಳು ಕೆಸರು ಎರಚಿ ಎಡಗೈ ಭಗ್ನ; ನಿಜವಾದ ಆರೋಪಿಗಳನ್ನುಪತ್ತೆಗೆಆಗ್ರಹ

0
ನಿಜಶರಣ ಅಂಬಿಗರ ಚೌಡಯ್ಯರ ಮೂರ್ತಿಗೆ ಕಿಡಿಗೇಡಿಗಳು ಕೆಸರು ಎರಚಿ ಎಡಗೈ ಭಗ್ನ; ನಿಜವಾದ ಆರೋಪಿಗಳನ್ನುಪತ್ತೆಗೆಆಗ್ರಹ

ದಿನಾಂಕ:10-10-2025 ರಂದು ಬೆಳಗಿನ ಜಾವದಲ್ಲಿ ನಿಜಶರಣ ಅಂಬಿಗರ ಚೌಡಯ್ಯರ ಮೂರ್ತಿಗೆ ಕಿಡಿಗೇಡಿಗಳು ಕೆಸರು ಎರಚಿ ಎಡಗೈ ಭಗ್ನಗೊಳಿಸಿ, ನಿಜಶರಣರಿಗೆ ಮತ್ತು ಅಪಾರ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಆರೋಪಿಗಳನ್ನು ಬಂಧಿಸುವಂತೆ ರಾಜ್ಯಾದ್ಯಂತ ಹೋರಾಟ ತೀವ್ರಗೊಂಡ ಹಿನ್ನಲೆಯನ್ನು ಪೋಲಿಸರು ಉದ್ದೇಶಪೂರ್ವಕವಾಗಿ ನಮ್ಮ ಸಮಾಜದ ಮುತ್ತಗಾ ಗ್ರಾಮದ ಅಧ್ಯಕ್ಷರಾದ ಶಿವರಾಜ ನಾಟೀಕಾರ ಇವರನ್ನು ಆರೋಪಿಗಳನ್ನಾಗಿ ಮಾಡಿ, ಇವರ ಚಾಲಕನಾದ ಮಲ್ಲಿಕಾರ್ಜುನ ಪಾಟೀಲ ಇವರನ್ನು ಮುಖ್ಯ ಆರೋಪಿಗಳನ್ನಾಗಿ ಮಾಡಿ & ಇವರ ಅಳಿಯನಾದ ಸೈಬಣ್ಣ ಪಟ್ಟೇದಾರ ಇವರನ್ನು ಮುಖ್ಯ ಸಾಕ್ಷಿದಾರ & ಆರೋಪಿಗಳನ್ನಾಗಿ ಮಾಡಿರುತ್ತಾರೆ ಹೀಗಾಗಿ ನಿಜವಾದ ಆರೋಪಿಗಳನ್ನು ಯಾರು ಎಂದು ಪತ್ತೆ ಹಚ್ಚುವುದು ಅತ್ಯಂತ ಅವಶ್ಯಕವಾಗಿದೆ. ಆದ್ದರಿಂದ ಈ ಪ್ರಕರಣವನ್ನು ಸಿ.ಬಿ.ಐ.ತನಿಖೆಗೆ ಅಥವಾ ಪ್ರಸ್ತುತ ಹೈಕೋರ್ಟ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ಮಾಡಬೇಕಾಗಿ ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇವೆ

LEAVE A REPLY

Please enter your comment!
Please enter your name here

error: Content is protected !!