Home Uncategorized ಕಾಳಿಘಾಟ ಶಕ್ತಿ ಪೀಠದಲ್ಲಿ ಅನುಷ್ಠಾನ ಕೈಗೊಂಡಿದ್ದು ನನಗೆ ಅತಿ ಆನಂದ ತಂದಿದೆ ಎಂದು ಪಂಚಾಕ್ಷರಿ ಸ್ವಾಮೀಜಿ ಹೇಳಿದರು

ಕಾಳಿಘಾಟ ಶಕ್ತಿ ಪೀಠದಲ್ಲಿ ಅನುಷ್ಠಾನ ಕೈಗೊಂಡಿದ್ದು ನನಗೆ ಅತಿ ಆನಂದ ತಂದಿದೆ ಎಂದು ಪಂಚಾಕ್ಷರಿ ಸ್ವಾಮೀಜಿ ಹೇಳಿದರು

0

ಕಾಳಿಘಾಟ ಶಕ್ತಿ ಪೀಠದಲ್ಲಿ ಅನುಷ್ಠಾನ ಕೈಗೊಂಡಿದ್ದು ನನಗೆ ಅತಿ ಆನಂದ ತಂದಿದೆ ಎಂದು ಪಂಚಾಕ್ಷರಿ ಸ್ವಾಮೀಜಿ ಹೇಳಿದರು ಸೇಡಂ ಪಶ್ಚಿಮ ಬಂಗಾಳದ ಕಾಳಿಘಾಟ ಶಕ್ತಿ ಪೀಠದಲ್ಲಿ ಸಪ್ಟೆಂಬರ್ 22 ರಿಂದ ಅಕ್ಟೋಬರ್ 1 ರವರೆಗೆ ಕಾಳಿಕಾ ದೇವತೆಯ ಶಕ್ತಿ ಪೀಠದ ದೇವಾಲಯದಲ್ಲಿ ಮೌನಾನುಷ್ಟಾನ ಕೈಗೊಂಡಿದ್ದು ನನಗೆ ಅತೀ ಅನಂದ ತಂದಿದೆ ಎಂದು ಶ್ರೀ ಹಾಲಪಯ್ಯ ವಿರಕ್ತ ಮಠದ ಶ್ರೀ ಪಂಚಾಕ್ಷರಿ ಸ್ವಾಮೀಜಿ ಹೇಳಿದರು. ಸುದ್ದಿಮಾದ್ಯಮದವರೊಂದಿಗೆ ಮಾತನಾಡಿ ಮೌನಾನುಷ್ಟಾನ ಕೈಗೊಳ್ಳಲು ಅಷ್ಟೊಂದು ದೂರ ಏಕೆ ಹೋಗಬೇಕೆಂದು ಜನರು ಮಾತಾನಾಡುತ್ತಿದ್ದರು.ಜ್ಯೋತಿರ್ಲಿಂಗ ತೆಗೆದುಕೊಂಡಾಗ 12 ಜ್ಯೋತಿರ್ಲಿಂಗ ಗಳು ಇವೆ ಆದರೆ 18 ಶಕ್ತಿ ಪೀಠಗಳು ಇವೆ ಇದರಲ್ಲಿ ಒಂದು ಶಕ್ತಿ ಪೀಠ ಕಲ್ಕತ್ತಾದಲ್ಲಿ ರುವ ಕಾಳಿಕಾದೇವಿ ದೇವಸ್ಥಾನದಲ್ಲಿ ಇದೆ.ನಾವು ನವರಾತ್ರಿ 9 ದಿನಗಳವರೆಗೆ ಆಚರಣೆ ಮಾಡುತ್ತೇವೆ 9 ದಿನದ ತಾಯಿಯ ಒಂದು ಶಕ್ತಿ ಪೀಠ ಇರುವದರಿಂದ ಸಂಕಲ್ಪ ಮಾಡಿ ನಾನು ಅನುಷ್ಟಾನ ಕೈಗೊಂಡು ಸಂಪೂರ್ಣ ಮಂಗಲ ಮಾಡಿಕೊಂಡು ಬಂದಿದ್ದೇನೆ ಇದಕ್ಕೆಲ್ಲ ಶಕ್ತಿ ಕೊಟ್ಟವರು ಸೇಡಂನ ಸರ್ವ ಭಕ್ತರು ದೇವಿ ಶಕ್ತಿ ಕಾರಣಿ ಬೂತವಾಗಿದೆ ಎಂದರು. ಇದಕ್ಕೂ ಮುಂಚಿತವಾಗಿ ರೈಲ್ವೆ ಸ್ಟೇಷನ್ ಹನುಮಾನ ಮಂದಿರದಿಂದ ಸಾರೋಟ ರಥದಲ್ಲಿ ನಾಗಮುರಗೇಶ ದೇವಾಲಯದವರೆಗೆ ವ್ಯಾದ ಮೇಳಗಳೊಂದಿಗೆ ಮಹಿಳೆಯರು ಭಜನೆ ಮಾಡುತ್ತ ಭವ್ಯ ಮೆರವಣಿಗೆಯೊಂದಿಗೆ ಶ್ರೀಗಳಿಗೆ ಸ್ವಾಗತ ಮಾಡಲಾಯಿತು. ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಬಾ ತಾಲೂಕಾ ಅದ್ಯಕ್ಷ ರಾಜಶೇಖರ ನೀಲಂಗಿ, ವೀರಭದ್ರಯ್ಯ ಸ್ವಾಮಿ ರುದ್ನೂರ, ನಾಗಯ್ಯಸ್ವಾಮಿ ಬೊಮ್ನಳ್ಳಿ, ಶ್ರೀದೇವಿ ಬಳಗಾರ, ಲಲಿತಾಬಾಯಿ ಯಾಕಾಪೂರ, ಚನ್ನಮ್ಮ ಪಾಟೀಲ, ಸುಲೋಚನ ಬಿಬ್ಬಳ್ಳಿ, ಜಗನ್ನಾಥರೆಡ್ಡಿ ತುಳೇರ, ಮಲ್ಲಿಕಾರ್ಜುನ ಸ್ವಾಮಿ ಬಿಬ್ಬಳ್ಳಿ, ಇನ್ನೂ ಅನೇಕ ಭಕ್ತಾಧಿಗಳು ಇದ್ದರು. ಶರಣಪ್ಪ ಎಳ್ಳಿ ssvtv news ಸೇಡಂ

LEAVE A REPLY

Please enter your comment!
Please enter your name here

error: Content is protected !!