Home Uncategorized ನ್ಯಾಪಕಿನ್ ಪ್ಯಾಡ್ ಸುಟ್ಟು ಲಕ್ಷಾಂತರ ರೂಪಾಯಿ ಸರಕಾರಕ್ಕೆ ವಂಚನೆ ಸಂತೋಷ ಪಾಟೀಲ ಹಾಗೂ ಸಂಬಂಧಪಟ್ಟವರ ವಿರುದ್ಧಆಗ್ರಹ

ನ್ಯಾಪಕಿನ್ ಪ್ಯಾಡ್ ಸುಟ್ಟು ಲಕ್ಷಾಂತರ ರೂಪಾಯಿ ಸರಕಾರಕ್ಕೆ ವಂಚನೆ ಸಂತೋಷ ಪಾಟೀಲ ಹಾಗೂ ಸಂಬಂಧಪಟ್ಟವರ ವಿರುದ್ಧಆಗ್ರಹ

0
ನ್ಯಾಪಕಿನ್ ಪ್ಯಾಡ್  ಸುಟ್ಟು ಲಕ್ಷಾಂತರ ರೂಪಾಯಿ ಸರಕಾರಕ್ಕೆ ವಂಚನೆ ಸಂತೋಷ ಪಾಟೀಲ ಹಾಗೂ ಸಂಬಂಧಪಟ್ಟವರ ವಿರುದ್ಧಆಗ್ರಹ

ಸರ್ಕಾರದ ಯೊಜನೆಯ ಶುಚಿ ನ್ಯಾಪಕಿನ್ ಪ್ಯಾಡ್ ಗಳನ್ನು ಸುಟ್ಟು ಲಕ್ಷಾಂತರ ರೂಪಾಯಿ ಸರಕಾರಕ್ಕೆ ಮೋಸ, ವಂಚನೆ ಮಾಡಿರುವ ಡಾ. ಸಂತೋಷ ಪಾಟೀಲ ಹಾಗೂ ಸಂಬಂಧಪಟ್ಟವರ ವಿರುದ್ಧ ಭಾರತೀಯ ನ್ಯಾಸಂಹಿದೆ ಕಲಂ 318 ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ಧಾಕಲಿಸಲು ಜಯಕರ್ನಾಟಕ ಸಂಘಟನೆಯ ಕಲಬುರಗಿ ವಿಭಾಗೀಯ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ ಆಗ್ರಹಿಸಿದ್ದಾರೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಲಬುರಗಿ ತಾಲೂಕಿನ ಫರಹತಾಬಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ವಿತರಣೆ ಮಾಡಲು ಇಟ್ಟಿರುವ ಸ್ಥಾನಟರಿ ಪ್ಯಾಡ್ ಆರೋಗ್ಯ ಇಲಾಖೆಯ ನಿಯಮದಂತೆ ಉಚಿತವಾಗಿ ನ್ಯಾಪಕಿನ್ ಪ್ಯಾಡ್ ಗಳನ್ನು ಎಲ್ಲಾ ಸರಕಾರಿ, ಅನುದಾನಿತ ಮತ್ತು ವಸತಿ ಶಾಲೆಗಳಿಗೆ 6 ರಿಂದ 12ನೇ ತರಗತಿಯವರೆಗಿನ 10ರಿಂದ 18 ವರ್ಷದ ವಿದ್ಯಾರ್ಥಿಗಳಿಗೆ ಹಾಗೂ ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತ ಇಲಾಖೆಯ ವಸತಿಗೃಹಗಳಲ್ಲಿರುವ ಹದಿಹರೆಯದ ವಿದ್ಯಾರ್ಥಿನಿಯರಿಗೆ ವಿತರಿಸಬೇಕಾಗಿತ್ತು. ಅದನ್ನು ವಿತರಿಸದೇ ಉದ್ದೇಶಪೂರ್ವಕವಾಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸಾವಿರಾರು ಪ್ಯಾಡಗಳನ್ನು ಬೆಂಕಿಗೆ ಹಾಕಿ ಸುಟ್ಟಿದ್ದಾರೆ ಅದನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆ ಪ್ರತಿಭಟಿಸಿತ್ತು, ಅದರ ಆಧಾರದ ಮೇಲೆ ದಿನಾಂಕ: 29.6.2025 ರಂದು ತನಿಖಾ ತಂಡ ತನಿಖೆ ನಡೆಸಿ ನೀಡಿದ ವರದಯಿಂದ ಸಾಬೀತಾಗಿದ್ದು, ತನಿಖೆ ನಡೆಸಿದ ಜಿಲ್ಲಾ ಆರ್ಸಿಹೆಜ್ ಅಧಿಕಾರಿಗಳು ಮತ್ತು ಡಾ. ಶಿವಶರಣಪ್ಪ ಡಿ ಭೂಸನೂರ ಅವರು ವರದಿ ಈಗಾಗಲೇ ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ ಅಲ್ಲದೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ದಿನಾಂಕ: 5,7.2025 ರಂದು ಮಾನ್ಯ ಆಯುಕ್ತರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಬೆಂಗಳೂರು ಅವರಿಗೆ ಸಹ ತಪ್ಪಿತಸ್ಥ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯ ವಿರುದ್ಧ ಶಿಸ್ತು ಕ್ರಮಕ್ಕೆ ಪತ್ರ ಬರೆದಿರುತ್ತಾರೆ. ಆದರೆ ಎರಡೂವರೆ ತಿಂಗಳಾದರು ತಪ್ಪಿತಸ್ಥ ಆಡಳಿತ ವೈದ್ಯಾಧಿಕಾರಿಯ ವಿರುದ್ಧ ಯಾವುದೇ ಕ್ರಮ ಜರುಗಿಸಲು ಮೇಲಾಧಿಕಾರಿಗಳು ವಿಫಲರಾಗಿದ್ದಾರೆ. ಹಾಗಾಗಿ ಕೂಡಲೇ ಕ್ರಿಮಿನಲ್ ಮುಕದ್ದಮೆ ಹೂಡಿ ಕ್ರಮ ಕೈಗೊಳ್ಳಲು ಆಗ್ರಹಿಸಲಾಗಿದೆ

LEAVE A REPLY

Please enter your comment!
Please enter your name here

error: Content is protected !!