1. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ನಿನ್ನೆ ಬೆಳಿಗ್ಗೆ ಸಣ್ಣ ಪ್ರಮಾಣದ ಭೂಕಂಪನ ಸಂಭವಿಸಿದ್ದು ಕೆಲ ಕಾಲ ಜನರಲ್ಲಿ ಆತಂಕ ಮೂಡಿಸಿತ್ತು ಮಾಹಿತಿ ಮೇರೆಗೆ ಗ್ರಾಮಕ್ಕೆ ಸಂಭಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಅದರ ಒಙದು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ
ಹೌದು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ ಗ್ರಾಮದಲ್ಲಿ ಬೆಳೆಗ್ಗೆ 8.17 ರ ಸುಮಾರಿಗೆ ಸಣ್ಣ ಪ್ರಮಾಣದ ಭೂಕಂಪನ ಸಂಭವಿಸಿದೆ ಅದರಿಂದಾಗಿ ಅಲ್ಲಿನ ಜನರಲ್ಲಿ ಕೊಂಚ ಆತಂಕ ಮೂಡಿಸಿದ್ದು ಗ್ರಾಮಸ್ತೆರಲ್ಲ ಭಯ ಬಿತಿಯಿಂದ ಮನೆಯಿಂದ ಹೊರಗೆ ಓಡಿ ಬರುವ ಪರಿಸ್ತಿತಿ ಉಂಟಾಗಿತ್ತು ಹಾಗೂ ಅಲ್ಲಿನ ಚಿಂಚನಸೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಲ್ಲಿನ ಅಧ್ಯಕ್ಷರು ಸೇರಿ ಅಲ್ಲಿನ ಮೇಲಧಿಕಾರಿಗಳು ಹಾಗೂ ತಹಶಿಲ್ದಾರ ಅವರಿಗೆ ಮಾಹಿತಿ ನೀಡಿದ್ದು ತಕ್ಷಣ ಗ್ರಾಮಕ್ಕೆ ಭೇಟಿ ನೀಡದ ಅಧಿಕಾರಿಗಳು ಜನರಲ್ಲಿ ದೈರ್ಯ ಹೇಳಿ ಅಲ್ಲಿನ ಜನರಲ್ಲಿ ತೊಂವಾಡಿ ನಿಂಗನವಾಡಿ ಸೇರಿದಂತೆ ಇನ್ನಷ್ಟು ಗ್ರಾಮಸ್ಥರಲ್ಲಿ ಹಾಗೂ ಸುತ್ತ ಮುತ್ತಲಿನ ಹಳ್ಳಿ ಜನರಿಗೆ ದೈರ್ಯ ತುಂಬಿ ಅಲ್ಲಿ ಭೂಕಂಪನ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡು ಅವರಿಗೆ ಈ ಕುರಿತು ಅರಿವು ಮೂಡಿಸಿದರು ಇದಕ್ಕೂ ಮುಂಚೆಯೂ ಸಹ 5ನೆಯ ತಾರೀಕು ಶುಕ್ರವಾರವೂ ಸಹ ಈ ರೀತಿ ಸಣ್ಣ ಪ್ರಮಾಣದ ಭೂಕಂಪನ ಸಂಭವಿಸಿದ್ದು ಇದರ ರಿಪೋರ್ಟ್ ಇನ್ನೂ ಬಂದಿಲ್ಲ ಆ ರಿಪೋರ್ಟ್ ಬಂದ ತಕ್ಷಣ ಮುಂದಿನ ಕ್ರಮ ಕೈಗೊಳ್ಳುವುದಾಗಿ ಚಿಂಚನಸೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಹಮದ್ ಪಾಶ ತಿಳಿಸಿದ್ದಾರೆ…ಇನ್ನೂ ಮಹಾನಾಯಕ ಜನಪರ ವೇದಿಕೆಯ ಅಧ್ಯಕ್ಷ ರಾದ ಶ್ರೀಶೈಲ ಮಾವಿನ ಅವರು ಮಾತನಾಡಿ…ನಾವು ಈ ಕುರಿತು ತಹಸಿಲ್ದಾರ್ ಅವರನ್ನ ಫೋನ್ ಮೂಲಕ ಮಾತನಾಡಿ ಹೇಳಿದಾಗ ತಹಸಿಲ್ದಾರ್ ಅವರು ಕಲಬುರಗಿ ಡಿಸಿ ಅವರ ಗಮನಕ್ಕೆ ತಂದರು ತಕ್ಷಣ ಭೂ ವಿಜ್ಞಾನ ಮತ್ತು ಮೈನ್ಸ್ ಅಧಿಕಾರಿಗಳು ಹಾಗೂ ತಹಸಿಲ್ದಾರ್ ಹಾಗೂ ಡಿಸಿ ಅವರ ಮೇರೆಗೆ ಅಲ್ಲಿನ ಗ್ರಾಮಸ್ಥರಿಯಲ್ಲಿ ಭೂಕಪನಾ ಕುರಿತು ಅರಿವು ಮೂಡಿಸಲಾಯಿತು ಈ ಕುರಿತಾಗಿ ಇಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಶ್ರೀಶೈಲ ಮಾವಿನ ಅವರು ತಿಳಿಸಿದ್ದರು ಮತ್ತು ಈ ಭೂಕಂಪನ ಕುರಿತು ಗ್ರಾಮಸ್ಥರಲ್ಲಿ ಸ್ವಲ್ಪ ಭಯದ ವಾತಾವರಣ ನಿರ್ಮಾಣ ವಾಗಿದ್ದು ವಯಸ್ಸಾದ ತಂದೆ ತಾಯಿ ಇದಾರೆ ಮಲಗಿದಾಗ ಇಂತಹ ಘಟನೆ ಸಂಭವಿಸಿದರೆ ಹೆಂಗೆ ಅಂತ ಪ್ರಶ್ನೆ ಮಾಡಿದರು….ಹಾಗೂ ಭೂ ವಿಜ್ಞಾನ ತಜ್ಞರು ಕೂಡ ಇದರ ಕುರಿತಾಗಿ ಚರ್ಚಿಸಿ ತಂಡ ರಚನೆ ಮಾಡುವುದಾಗಿ ತಿಳಿಸಿದ್ದಾರೆ ಎಂದರು ಮಳೆ ಹೆಚ್ಚಾಗಿ ಇದು 7 ಕಿಲೋಮೀಟರ್ ಒಳಗಡೆ ಒಂದು ಪದರು ಸ್ಪೋಟಿಸಿರಬಹುದು ಅಂತ ವಿಜ್ಞಾನಿಗಳು ಅಂದಾಜಿಸಿದ್ದಾರೆ ಈ ಕುರಿತು ಸರಕಾರ ಹಾಗೂ ಸಚಿವರು ಗಮನಕ್ಕೆ ತಂದು ಒಂದು ತಂಡ ರಚನೆ ಮಾಡಿ ಅಲ್ಲಿನ ಸುತ್ತಲಿನ ಸ್ಥಳದ ಕುರಿತು ಶೋಧ ಕಾರ್ಯ ನಡೆಸುವುದಾಗಿ ತಿಳಿಸಿದ್ದಾರೆ ಒಟ್ಟಿನಲ್ಲಿ ಈ ಭೂಕಂಪನ ಕುರಿತಾಗಿ ಅಲ್ಲಿನ ಗ್ರಾಮಸ್ಥರಲ್ಲಿ ಭಯ ಉಂಟುಮಾಡಿದ್ದು ಸರಕಾರ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳ ಯಾವ ರೀತಿ ಕ್ರಮ ಕೈಗೊಳ್ಳುತ್ತೆ ಕಾದು ನೋಡ್ಬೇಕಿದೆ





