ಕಲಬುರಗಿ ನಗರದಲ್ಲಿ ಖಾಸಗಿ ಶಾಲೆಗಳ ವಾಹನಗಳ ಶಾಲೆಯ ವಾಹನ ಸರಣಿ ಅಪಘಾತಗಳು ಹೆಚ್ಚಾಗುತ್ತಿದೆ. ನಗರದಲ್ಲಿ ಒಂದೇ ವರ್ಷದಲ್ಲಿ ಸುಮಾರು ಅವಘಾತಗಳು ಆಗಿರುವುದು ತಮ್ಮ ಗಮನಕ್ಕೂ ಕೂಡಾ ಇರುತ್ತದೆ. ಇದಕ್ಕೆ ಮುಖ್ಯ ಕಾರಣಗಳೆಂದರೆ, ಶಾಲೆಯ ಆಡಳಿತ ಮಂಡಳಿ ಹಾಗೂ ಶಾಲೆಯ ಮುಖ್ಯಗುರುಗಳು ವಾಹನ ಚಾಲಕರಿಗೆ ಇಂತಿಷ್ಟು ಸಮಯದಲ್ಲಿ ಮಕ್ಕಳನ್ನು ಶಾಲೆಗೆ ಕರೆ ತರಬೇಕು ಮತ್ತು ಇಂತಿಷ್ಟ ಸಮಯದಲ್ಲಿ ಶಾಲೆ ಮುಗಿದ ನಂತರ ಮಕ್ಕಳಿಗೆ ಮನೆಗೆ ಬಿಟ್ಟು ವಾಹನಗಳನ್ನು ಶಾಲೆಯಲ್ಲಿ ನಿಲ್ಲಿಸಬೇಕೆಂದು ಒತ್ತಡ ಷೇರುತ್ತಿರುವದರಿಂದ ವಾಹನ ಚಾಲಕರು ಅವಸರವಾಗಿ ವಾಹನ ಚಲಾಯಿಸುವುದರಿಂದ ಅಪಘಾತಗಳು ಉಂಟಾಗುತ್ತಿವೆ. ಇದರಿಂದ ಚಿಕ್ಕ ಚಿಕ್ಕ ಮಕ್ಕಳು ಬೆಳೆಯುವ ವಯಸ್ಸಿನಲ್ಲಿ ಕೈ ಕಾಲು ಕಳೆದು ಕೊಂಡು ಅಂಗವಿಕಲರಾಗುವಂತಹ ಪರಿಸ್ಥಿತಿ ಉಂಟಾಗಿರುತ್ತದೆ. ಒಂದು ಶಾಲಾ ವಾಹನದಲ್ಲಿ ಪ್ರತಿ ವಾಹನಕ್ಕೆ . ಇಂತಿಷ್ಟು ಮಕ್ಕಳನ್ನು ತೆಗೆದುಕೊಂಡು ಹೋಗುವದು ಮತ್ತು ತಂದು ಬಿಡುವ ವ್ಯವಸ್ಥೆಯನ್ನು ಮಾಡುವಂತೆ ಶಾಲಾ ಆಡಳಿತ ಮಂಡಳಿಯವರಿಗೆ ಸೂಚಿಸಬೇಕು. ಈಗಿರುವ ಪರಿಸ್ಥಿತಿಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದಾಗಿನಿಂದ ಮಕ್ಕಳು ಮನೆಗೆ ಬರುವವರಿಗೆ ಯಾವ ಸಮಯದಲ್ಲಿ “ಏನಾಗುತ್ತದೆ ಎನ್ನುವ ಆತಂಕದಿಂದ ಇರುತ್ತಾರೆ. ವಾಹನಗಳು ಅಪಘಾತವಾದಾಗ ಆಡಳಿತ ಎಂಡಳಿಯವರಿಗೆ ವಿಚಾರಿಸಿದರೆ ವಾಹನದ ಬ್ರೇಕ್ ಫೇಲ್ ಆಗಿರುತ್ತದೆ ಎಂದು ತಿಳಿಸಿರುತ್ತಾರೆ. ಆದರೆ ಇದೇ ಆಡಳಿತ ಮಂಡಳಿಯವರು ತಮ್ಮ ಶಾಲೆಯ ವಾಹನಗಳನ್ನು ಸರಿಯಾಗಿ ದುರಸ್ಥಿ ಮಾಡಿಸಿರುವುದಿಲ್ಲ ಆದ್ದರಿಂದ ಶಾಲಾ ಆಡಳಿತ ಮಂಡಳಿಯವರಿಗೆ ಶಾಲಾ ವಾಹನವನ್ನು ಸರಿಯಾದ ಸಮಯಕ್ಕೆ ದುರಸ್ಥಿ ಮಾಡಿಸಲು ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಬೇಕು.ಅಂತ ಕರ್ನಾಟಕ ಸಂಘಟನಾ ವೇದಿಕೆ ವತಿಯಿಂದ ಆಗ್ರಹಿಸಲಾಗಿದೆ
ನಗರದಲ್ಲಿ ಖಾಸಗಿ ಶಾಲೆಗಳ ವಾಹನಗಳ ಶಾಲೆಯ ವಾಹನ ಸರಣಿ ಅಪಘಾತಗಳು ಹೆಚ್ಚಾಗುತ್ತಿದೆ
ನಗರದಲ್ಲಿ ಖಾಸಗಿ ಶಾಲೆಗಳ ವಾಹನಗಳ ಶಾಲೆಯ ವಾಹನ ಸರಣಿ ಅಪಘಾತಗಳು ಹೆಚ್ಚಾಗುತ್ತಿದೆ
RELATED ARTICLES
Recent Comments
ಮೇಲೆ Hello world!





