ವಿದ್ಯಾರ್ಥಿಗಳು ಶ್ರಮಪಟ್ಟು ಶ್ರದ್ದೆಯಿಂದ ನಿರಂತರ ಗುರಿ ಇಟ್ಟುಕೊಂಡು 3 ವರ್ಷ ದಿನಕ್ಕೆ 10 ಗಂಟೆಯಂತೆ ಓದಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ, ಸಾಧನೆ ಮಾಡಿದರೆ, ಜೀವನ ಪರ್ಯಂತ ನೆಮ್ಮದಿಯಾಗಿರಬಹುದು ಎಂದು ಕರ್ನಾಟಕ ಗೃಹ ಮಂಡಳಿ ಆಯುಕ್ತರು ಹಾಗೂ ಹಿಂದಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರಾದ ಕೆ.ಎ. ದಯಾನಂದ ತಿಳಿಸಿದರು. ನಗರದ ಕಲಾಮಂದಿರದಲ್ಲಿ ಸಮನ್ವಯ ಟ್ರಸ್ಟ್ ಶಿವಮೊಗ್ಗ, ಕಾಲೇಜು ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆದ ಭರವಸೆಯ ಹೆಜ್ಜೆ 3ರ ಬದುಕಿನ ಸಾಧ್ಯತೆಗಳ ಕುರಿತು ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ದುರ್ಗಪ್ಪ ಅಂಗಡಿ ಎಂಬ ರೈತ ಎಸ್ಸೆಸ್ಸೆಲ್ಸಿ ಫೇಲಾಗಿ ಕೃಷಿಯಲ್ಲಿ ನಷ್ಟ ಅನುಭವಿಸಿ ಸಾಲ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿ ಈಗ ಯಶಸ್ವಿ ರೈತರಾಗಿ ಸಮಗ್ರ ಕೃಷಿ ಮಾಡಿಕೊಂಡು ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದಾರೆ. ನಾನು ಬರೆದ ಅವರ ಸಾಹಸಗಾತೆ ಮಂಗಳೂರು ವಿವಿ ಮತ್ತು ಕುವೆಂಪು ವಿವಿಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಏಕೆಂದರೆ ಅವರಲ್ಲಿದ್ದ ಛಲ ನಿರಂತರ ಶ್ರಮದಿಂದ, ಹಾಗೆಯೇ ಧ್ಯಾನ್ ಕಶ್ಯಪ್ ಎಂಬ 19ವರ್ಷದ ಅಂಗವಿಕಲ ಯುವಕ ಶ್ರೀಲಂಕಾದಿಂದ ಭಾರತದವರೆಗೆ 30ಕಿ.ಮೀ. ಸಮುದ್ರದಲ್ಲಿ ಈಜುವ ಮೂಲಕ ಅಂತಾರಾಷ್ಟ್ರೀಯ ಈಜು ಪಟುವಾಗಿದ್ದಾರೆ. ಅದು ಅವನಲ್ಲಿದ್ದ ಛಲ ಆತ್ಮವಿಶ್ವಾಸ ನಿಮ್ಮಲ್ಲೇಕೆ ಬರಬಾರದು. ನಾನು ಸಹ ಕೆಸ್ತೂರು ಕೊಪ್ಪಲು ಎಂಬ ಹಳ್ಳಿಯ ಬಡ ರೈತನ ಮಗ ಎಸ್ಸೆಸ್ಸೆಲ್ಸಿ ನಂತರ ಲೈನ್ ಮ್ಯಾನ್ ಆಗಿ ಕೆಲಸಕ್ಕೆ ಸೇರಿಕೊಂಡು ನಂತರ ಓದಿಕೊಂಡು ಶಿಕ್ಷಕನಾಗಿ ಕೆಎಎಸ್ ಉತ್ತೀರ್ಣನಾಗಿ ಐಎಎಸ್ ಆಗಿ ಬೆಂಗಳೂರು ಮತ್ತು ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಈಗ ನಿಮ್ಮ ಮುಂದೆ ನಿಂತಿದ್ದೇನೆ, ಇದೆಲ್ಲಾ ಆಗಿದ್ದ ಕಠಿಣ ಪರಿಶ್ರಮದಿಂದ ಐಎಎಸ್ ಮತ್ತು ಐಪಿಎಸ್ಹೆಚ್ಚಾಗಿ ಪಾಸಾಗುವವರು ಬಿಹಾರದವರು, ಕೆಎಎಸ್ನಲ್ಲಿ ತುಂಬಾ ಜನ ಕೋಲಾರದವರು ಪಾಸಾಗುತ್ತಾರೆ. ಏಕೆಂದರೆ ಅಲ್ಲಿ ಜನಸಂಖ್ಯೆ ಬಡತನ ಜಾಸ್ತಿ, ಎಲ್ಲಿ ಬಡತನ ಕಷ್ಟ ಇರುತ್ತದೋ ಆ ವ್ಯಕ್ತಿಗಳಲ್ಲಿ ಛಲ ಇರುತ್ತದೆ. ಛಲ ಇರುವವರು ಶ್ರಮಪಟ್ಟು ಗೆಲ್ಲುತ್ತಾರೆ. ಇವರೆಲ್ಲರು ನಿಮಗೆ ಸ್ಪೂರ್ತಿಯಾಗಲೆಂದು ಈ ಕಾರ್ಯಾಗಾರವನ್ನು ಮಾಡಿದ್ದೇವೆ. ಮೊಬೈಲ್ ಅನ್ನು ಒಳ್ಳೆಯದಕ್ಕೆ ಉಪಯೋಗಿಸಿ, ನಿಮಗೆ ಏನು ಕೊರತೆ ಇದೆಯೋ ಅದೇ ನಿಮಗೆ ಛಲವನ್ನು ಹುಟ್ಟಿಸುತ್ತದೆ. ಸಮಯ, ಸಂದರ್ಭ ಪರಿಸ್ಥಿತಿಗಳಿಗೆ ಮನಸ್ಥಿತಿಗಳನ್ನು ಹೊಂದಿಸಿಕೊಂಡು ಗುರಿಮುಟ್ಟಲು ಪ್ರಯತ್ನ ಮಾಡಬೇಕು ಎಂದರು. ಸಮಾರಂಭದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ರೈತರಾದ ದುರ್ಗಪ್ಪ ಅಂಗಡಿ ಅಂತಾರಾಷ್ಟ್ರೀಯ ಈಜುಪಟು ಧ್ಯಾನ್ ಕಶ್ಯಪ್, ಯೋಗಪಟು ಸಿ. ಸುಂದರಿಸನ್, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಡಿ.ಎಸ್. ಪ್ರತಿಮಾ, ಸ್ಪೂರ್ತಿ ದಯಾನಂದ್, ಮಹಾನಗರಪಾಲಿಕೆ ಉಪ ಆಯುಕ್ತರಾದ ಜಿ.ಎಸ್. ಸೋಮಶೇಖರ್ಜಿಗಣಿ, ಬಿಸಿಎಂ ಜಿಲ್ಲಾಧಿಕಾರಿ ರಾಘವೇಂದ್ರ,ಎ.ವಿ. ವಿಕ್ರಂ, ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ, ಎಸ್.ವಿ. ವೆಂಕಟೇಶ್, ಜಗದೀಶ್ಕೋರಿ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು
ವಿದ್ಯಾರ್ಥಿಗಳು ನಿರಂತರ ಗುರಿ ಇಟ್ಟುಕೊಂಡು ಸಾಧನೆ ಮಾಡಿ- ಕೆ.ಎ. ದಯಾನಂದ
ವಿದ್ಯಾರ್ಥಿಗಳು ನಿರಂತರ ಗುರಿ ಇಟ್ಟುಕೊಂಡು ಸಾಧನೆ ಮಾಡಿ- ಕೆ.ಎ. ದಯಾನಂದ
RELATED ARTICLES
Recent Comments
ಮೇಲೆ Hello world!





