ಜೇವರ್ಗಿ ಪಟ್ಟಣದಲ್ಲಿ 20 ಹಾಸಿಗೆ ಸಾಮಥ್ಯದ ಸುಸಜ್ಜಿತ ಅತ್ಯಾಧುನಿಕ ಚಿರಾಗ್ ಕೆರ್ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಪ್ರಾರಂಭೋತ್ಸವವನ್ನು ಸೆ 14 ರಂದು ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಹಾಗೂ ಖ್ಯಾತ ಅರ್ಥೊಪೆಡಿಕ್ ಸರ್ಜನ್ ಡಾ. ಅಕ್ಷಯ ಉಪ್ಪಿನ ಅವರು ಪತ್ರಿಕಾ ಗೋಷ್ಠಿ ನಡೆಸಿ ತಿಳಿಸಿದ್ದಾರೆ ಜೇವರ್ಗಿ ಪಟ್ಟಣದ ಬಿಬಿ ರಸ್ತೆಯಲ್ಲಿರುವ ನೂತನ ಆಸ್ಪತ್ರೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ನುರಿತ ವೈದ್ಯರ ತಂಡವು ಸೇರಿ ಈ ಭಾಗದ ಜನರ ಆರೋಗ್ಯದ ಹಿತದೃಷ್ಟಿಯಿಂದ ಒಂದು ಒಳ್ಳೆಯ ಆಸ್ಪತ್ರೆಯನ್ನು ನಾವು ಆರಂಭಿಸುತ್ತಿದ್ದೇವೆ ಎಂದರು. ಆಸ್ಪತ್ರೆಯಲ್ಲಿನ ವೈದ್ಯರು ಒಂದೊಂದು ವಿಭಾಗದಲ್ಲಿ ಒಂದೊಂದು ರೀತಿಯಲ್ಲಿ ಪರಿಣಿತಿಯನ್ನು ಪಡೆದಿದ್ದು, ಎಲ್ಲರ ಸೇವೆಯನ್ನು ಪಡೆದುಕೊಂಡು ಈ ಭಾಗದ ರೊಗಿಗಳ ಸಮಸ್ಯೆಗಳಿಗೆ ತ್ವರಿತವಾಗಿ ಈ ಹಾಗೂ ಪರಿಣಾಮಕಾರಿಯಾಗಿ ಸ್ಪಂದಿಸಲು ಆಸ್ಪತ್ರೆಯು ದಿನದ 24 ಗಂಟೆಗಳ ಅವಧಿಯವರೆಗೂ ಸಹ ಸೇವೆ ಒದಗಿಸಲಿದೆ ಎಂದು ಅವರು ಹೇಳಿದರು. ತಾಲೂಕಿನಿಂದ ಅನೇಕ ರೋಗಿಗಳು ಕಲಬುರಗಿ, ಸೊಲ್ಲಾಪುರ ಹಾಗೂ ಹೈದ್ರಾಬಾದಗೆ ಚಿಕಿತ್ಸೆ ಹೋಗುತ್ತಿದ್ದರು. ಈಗ ಅಂತಹ ಪರಿಸ್ಥಿತಿ ಇಲ್ಲ. ಎಲ್ಲ ಚಿಕಿತ್ಸೆಯನ್ನೂ ಸಹ ನೀಡುವಂತಹ ಆಸ್ಪತ್ರೆಗಳು ಪಟ್ಟಣದಲ್ಲಿವೆ ಅದೇ ರೀತಿ ಚಿರಾಗ್ ಕೆರ್ ಆಸ್ಪತ್ರೆಯೂ ಸಹ ಸೇರಿದೆ. ಹಾಗಾಗಿ ಆಸ್ಪತ್ರೆಯ ಉಪಯೋಗ ತಾಲೂಕಿನ ಜನರು ಪಡೆಯಬೇಕು ಎಂದು ಅವರು ಮನವಿ ಮಾಡಿದರು. ನಾವು ಹಣಗಳಿಕೆಗಾಗಿ ಆಸ್ಪತ್ರೆಯನ್ನು ಪ್ರಾರಂಭಿಸಿಲ್ಲ. ಜನರ ಜೀವರಕ್ಷಣೆಗಾಗಿ ನಾವು ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದೇವೆ. ನಮ್ಮದು ಮೊದಲು ರೋಗಿಯ ಗುಣಮುಖತೆಗೆ ಒತ್ತುಕೊಡುತ್ತೇವೆ. ನಂತರ ಹಣಕಾಸಿನ ವಿಚಾರ ಎಂದು ಅವರು ಹೇಳಿದರು. ನೂತನ ಆಸ್ಪತ್ರೆಯಲ್ಲಿ ಸರ್ಕಾರದ ಯೋಜನೆಗಳೂ ಸಹ ಜಾರಿಯಾಗಲಿವೆ. ಆ ಕುರಿತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ ಅವರು, ದರಪಟ್ಟಿಯನ್ನು ಆಸ್ಪತ್ರೆಯ ಮುಂಭಾಗದಲ್ಲಿ ಹಾಕಲಾಗುತ್ತಿದೆ. ರೋಗಿಯ ಉಪಚಾರದಲ್ಲಿ ಮಾತ್ರ ಯಾವುದೇ ರೀತಿಯಲ್ಲಿ ಹಿಂಜರಿಕೆ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಆಸ್ಪತ್ರೆಯಲ್ಲಿ ಅರ್ಥೋಪೇಡಿಕ್, ಜನರಲ್ ಸರಜರಿ, ಐ.ಸಿ.ಯು ಕ್ರಿಟಿಕಲ್ ಕೇರ್ , ಜನರಲ್ ಮೆಡಿಸನ್, ಯುರಾಲೊಜಿ, ಕಿಡ್ನಿ, ಹೃದ್ರೋಗ, ಪಿಡಿಯಾಟ್ರಿಕ್ , ಕ್ಯಾನ್ಸರ್, ಸುಟ್ಟಗಾಯಗಳಿಗೆ ಚಿಕಿತ್ಸೆ, ಅಪಘಾತದಲ್ಲಿನ ಗಾಯಾಳುಗಳಿಗೆ ಚಿಕಿತ್ಸೆ, ಆಕಸ್ಮಿಕ ಮತ್ತು ತುರ್ತು ಆರೈಕೆಯಂತಹ ಚಿಕಿತ್ಸೆಗಳು ಲಭ್ಯವಿದೆ ಎಂದು ಹೇಳಿದರು. ನಮ್ಮ ಆಸ್ಪತ್ರೆಯಲ್ಲಿ ರೋಗಿಗಳೊಂದಿಗೆ ಸಿಬ್ಬಂದಿಗಳು ಸೌಜನ್ಯದಿಂದ ವರ್ತಿಸುವರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಅವರಿಗೆ ಆಸ್ಪತ್ರೆಯಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗವನ್ನೂ ಸಹಕಲ್ಪಿಸಲಾಗಿದೆ ಎಂದು ಅವರು ಹೇಳಿದರು ನೂತನ ಆಸ್ಪತ್ರೆಯ ಪ್ರಾರಂಭೋತ್ಸವಕ್ಕೆ ಸೊನ್ನ ವಿರಕ್ತ ಮಠದ ಪೂಜ್ಯ ಶ್ರೀ ಡಾ.ಶಿವಾನಂದ ಮಹಾಸ್ವಾಮಿ,ಅಲಕೇರಿ ಯಲಗೋಡದ ಪೂಜ್ಯ ಶ್ರೀ ಗುರುಲಿಂಗ ಮಹಾಸ್ವಾಮಿಗಳು, ಶಹಾಪೂರ ಮಹಾಲರೋಜಾದ ಶ್ರೀ ಮಲ್ಲಿಕಾರ್ಜುನ ಮುತ್ಯಾ, ನಾರಯಣಪೂರದ ಶ್ರೀ ರಶೀದ ಮುತ್ಯಾ ಸಾನಿಧ್ಯವಹಿಸುವವರು, ಕಲಬುರಗಿ ಸಂಸದರಾದ ರಾಧಕೃಷ್ಣ ದೊಡ್ಡಮನಿ, ಕೆ.ಕೆ.ಆರ್.ಡಿ.ಬಿ ಅಧ್ಯಕ್ಷರು ಹಾಗೂ ಶಾಸಕರಾದ ಡಾ, ಅಜಯಸಿಂಗ , ಕಲಬುರಗಿ ದಕ್ಷೀಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್, ಮಾಜಿ ಶಾಸಕರಾದ ದೊಡ್ಡಪ್ಪಗೌಡ ನರಿಬೋಳ. ಬಿಜೆಪಿ ಮುಖಂಡರಾದ ಶಿವರಾಜ್ ಪಾಟೀಲ್ ರದ್ದೇವಾಡಗಿ, ಮಾಜಿ ಸಚಿವರಾದ ರೆವುನಾಯಕ ಬೇಳಮಗಿ ,ಮಾಜಿ ಜಿ.ಪಂ ಸದಸ್ಯ ಶಾಂತಪ್ಪ ಕೊಡಲಗಿ ಸೇರಿದಂತೆ ಅಧಿಕಾರಿಗಳು ಗಣ್ಯರು ಆಗಮಿಸಲಿದ್ದಾರೆ ಎಂದು ಅವರು ಹೇಳಿದರು
20 ಹಾಸಿಗೆ ಸಾಮಥ್ಯದ ಸುಸಜ್ಜಿತ ಅತ್ಯಾಧುನಿಕ ಚಿರಾಗ್ ಕೆರ್ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಪ್ರಾರಂಭ
20 ಹಾಸಿಗೆ ಸಾಮಥ್ಯದ ಸುಸಜ್ಜಿತ ಅತ್ಯಾಧುನಿಕ ಚಿರಾಗ್ ಕೆರ್ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಪ್ರಾರಂಭ





