Home Uncategorized ಡಾಕ್ಟರ್ ಬಾಬು ಜಗಜೀವನ್ ರಾಮ್ ಸಮುದಾಯ ಭವನಕ್ಕೆ ಸರ್ವೇ ನಂಬರ್ 2890 ಈ ಸರ್ಕಾರಿ ಜಾಗವನ್ನು ಮೀಸಲಿಡಬೇಕೆಂದು ಒತ್ತಾಯ

ಡಾಕ್ಟರ್ ಬಾಬು ಜಗಜೀವನ್ ರಾಮ್ ಸಮುದಾಯ ಭವನಕ್ಕೆ ಸರ್ವೇ ನಂಬರ್ 2890 ಈ ಸರ್ಕಾರಿ ಜಾಗವನ್ನು ಮೀಸಲಿಡಬೇಕೆಂದು ಒತ್ತಾಯ

0
ಡಾಕ್ಟರ್ ಬಾಬು ಜಗಜೀವನ್ ರಾಮ್ ಸಮುದಾಯ ಭವನಕ್ಕೆ ಸರ್ವೇ ನಂಬರ್ 2890 ಈ ಸರ್ಕಾರಿ ಜಾಗವನ್ನು ಮೀಸಲಿಡಬೇಕೆಂದು ಒತ್ತಾಯ

ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಮಾಜಿ ಉಪ ಪ್ರಧಾನಿ ಹಸಿರು ಕ್ರಾಂತಿ ಹರಿಕಾರ ಡಾಕ್ಟರ್ ಬಾಬು ಜಗಜೀವನ್ ರಾಮ್ ಸಮುದಾಯ ಭವನಕ್ಕೆ ಸರ್ವೇ ನಂಬರ್ 2890 ಈ ಸರ್ಕಾರಿ ಜಾಗವನ್ನು ಮೀಸಲಿಡಬೇಕೆಂದು ಒತ್ತಾಯಿಸಿ. ಜಾಂಬವ ಯುವ ಸೇನಾ ಸಮಿತಿ ತಾಳಿಕೋಟೆ ವತಿಯಿಂದ ಇಂದು ಪುರಸಭೆ ಕಂದಾಯ ನಿರೀಕ್ಷಕ ಸುರೇಶ್ ಅಮರಣ್ಣವರ ಮೂಲಕ ಪುರಸಭೆ ಮುಖ್ಯ ಅಧಿಕಾರಿಗಳಿಗೆ ಹಾಗೂ ಅಧ್ಯಕ್ಷ ಉಪಾಧ್ಯಕ್ಷರಿಗೆ / ಸರ್ವ ಸದಸ್ಯರಿಗೆ ಮನವಿ ಸಲ್ಲಿಸಿದ್ದಾರೆ ತಾಳಿಕೋಟೆ ತಾಲೂಕಿನಲ್ಲಿ ಸಮುದಾಯದ ಬಹು ದೊಡ್ಡ ಮಟ್ಟದಲ್ಲಿ ಇದ್ದು ಸಮುದಾಯದ ಸಂಸ್ಕೃತಿಕ ಸಭೆ ಸಮಾರಂಭಗಳನ್ನು ನಡೆಸಲು ಸ್ಥಳದ ತೀವ್ರ ತೊಂದರೆಯಾಗುತ್ತಿದ್ದು.ಈ ಸಮುದಾಯಕ್ಕೆ ಒಂದು ಸಮುದಾಯ ಭವನವನ್ನು ನಿರ್ಮಾಣ ಮಾಡಲು ಪಟ್ಟಣದಲ್ಲಿರುವ ಸಿಪಿಎಸ್ ನಂಬರ್ 2890 ಜಾಗವನ್ನು ಡಾಕ್ಟರ್ ಬಾಬು ಜಗಜೀವನ್ ರಾಮ್ ಸಮುದಾಯ ಭವನ ಹೆಸರಿನಲ್ಲಿ ಸದರಿ ನಿವೇಶವನ್ನು ಕಾಯ್ದಿರಿಸಿ ಸಮುದಾಯ ಭವನವನ್ನು ಕಟ್ಟಡ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಬೇಕೆಂದು ಪುರಸಭೆ ಮುಖ್ಯ ಅಧಿಕಾರಿಗಳಿಗೆ ಹಾಗೂ ಅಧ್ಯಕ್ಷ ಮತ್ತು ಉಪಾಧ್ಯಕ್ಷಗೆ ಮನವಿ ಸಲ್ಲಿಸಲಾಗಿದೆ

LEAVE A REPLY

Please enter your comment!
Please enter your name here

error: Content is protected !!