Home Uncategorized . ಆಸ್ಪತ್ರೆಯಲ್ಲಿ ಕಿಡ್ನಿ ಡೈಯಾಲಿಸಿಸ್’ನ ಮಶೀನುಗಳು ಕೆಟ್ಟುಹೋಗಿದ್ದೂ, ಅವುಗಳನ್ನು ಸರಿಪಡಿಸಿ ; ಅಮೃತ ಪಾಟೀಲ್

. ಆಸ್ಪತ್ರೆಯಲ್ಲಿ ಕಿಡ್ನಿ ಡೈಯಾಲಿಸಿಸ್’ನ ಮಶೀನುಗಳು ಕೆಟ್ಟುಹೋಗಿದ್ದೂ, ಅವುಗಳನ್ನು ಸರಿಪಡಿಸಿ ; ಅಮೃತ ಪಾಟೀಲ್

0

ಕಲಬುರಗಿ ನಗರದಲ್ಲಿನ ಜಿಮ್ಸ್ ಸರ್ಕಾರಿ ಆಸ್ಪತ್ರೆಯಲ್ಲಿ ಕಿಡ್ನಿ ಡೈಯಾಲಿಸಿಸ್’ನ ಮಶೀನುಗಳು ಕೆಟ್ಟುಹೋಗಿದ್ದೂ, ಅವುಗಳನ್ನು ಸರಿಪಡಿಸಿ, ಹೊಸದಾಗಿ ಇನ್ನಷ್ಟು ಮಷೀನುಗಳನ್ನು ಅಳವಡಿಸಬೇಕೆಂದು ಅಮೃತ ಪಾಟೀಲ್ ಅವರು ಒತ್ತಾಯಿಸಿದ್ದಾರೆ.

ಕಲಬುರಗಿ ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರಿಗೆ ಪ್ರತಿಭಟನೆ ನಡೆಸಿದ ಅವರು ಕಲಬುರಗಿ ಜಿಲ್ಲಾ ಜಿಮ್ಸ್ ಆಸ್ಪತ್ರೆಯಲ್ಲಿ ಕಳೆದ 2  ವರ್ಷಗಳಿಂದ ಪ್ರತಿ ಎರಡು ದಿನಗಳಿಗೊಮ್ಮೆ ಡೈಲಾಸಿಸ್ ಮಾಡಿಸಲು ನಮ್ಮವರನ್ನು ನಾನು ಕರೆದುಕೊಂಡು ಹೋಗುತ್ತಿದ್ದು, ಆದರೆ ಜಿಮ್ಸ್ ಆಸ್ಪತ್ರೆಯಲ್ಲಿ ಯಾವಾಗ ಹೋದರು ಸಹ ಡೈಲಾಸಿಸ್ ಮಾಡಿಸಲು 200 ರೋಗಿಗಳ ವೈಟಿಂಗ್ ಲಿಸ್ಟ್ ಇರುತ್ತದೆ ಎಂದು ಇಲ್ಲಿನ ವೈದ್ಯಾಧಿಕಾರಿಗಳು ಹೇಳುತ್ತಾರೆ. ಆಸ್ಪತ್ರೆಯಲ್ಲಿ ಒಟ್ಟು 8 ಡೈಲಾಸಿಸ್ ಮಷೀನುಗಳಿದ್ದೂ ಅದರಲ್ಲಿ 6 ಮಷೀನುಗಳು ಕೆಟ್ಟು ಹೋಗಿವೆ. ಹಾಗೆ 2 ಮಷೀನುಗಳು ಮಾತ್ರ ಕಳೆದ ಎರಡು ವರ್ಷಗಳಿಂದ ಕೆಲೆಸ ನಿರ್ವಹಿಸುತ್ತಿವೆ. ಹಾಗೆಯೇ ಕಳೆದೆರಡು ವರ್ಷಗಳಿಂದಲೂ ಆ ಎರಡು ಮಷೀನುಗಳ‌ ಮೇಲೆ ಕಿಡ್ನಿ ರೋಗಿಗಳಿಗೆ ಡೈಲಾಸಿಸ್ ಮಾಡುತ್ತಿದ್ದೂ, ಒಬ್ಬ ರೋಗಿಗೆ ನಾಲ್ಕು ತಾಸು ಡೈಲಾಸಿಸ್ ಮಾಡುವುದರಿಂದ ವೇಟಿಂಗ್ ಅವಧಿ ಜಾಸ್ತಿಯಾಗಿ ಕಿಡ್ನಿ ರೋಗಿಗಳು ಸಮಯಕ್ಕೆ ಸರಿಯಾಗಿ ಡೈಲಾಸಿಸ್ ಆಗದೇ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ಇದಕ್ಕೆಲ್ಲ ಸರ್ಕಾರದ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿದ್ದಾರೆ

LEAVE A REPLY

Please enter your comment!
Please enter your name here

error: Content is protected !!